ಮೈಸೂರು: ಅಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ದಿಢೀರ್ ಅಂತ ಮುಂಬೈಗೆ ಹೋಗಿದ್ದು ಯಾಕೆ? ಸುಧಾಕರ್ ಅವರಿಗೆ ಆಗಿದ್ದೇನು ಎಂಬ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಮೌನ ಮುರಿದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಚಿವರು, ಅಂದು ರಾಜ್ಯದಲ್ಲಿ ಭಯಾನಕ ವಾತಾವರಣವಿತ್ತು. ನಮ್ಮನ್ನೂ ಹಿಡಿದು ಹೊಡೆದು ಬಿಡುತ್ತಾರೆ ಎಂಬ ಭಯದಿಂದ ನಾವೆಲ್ಲ ಮುಂಬೈಗೆ ಹೋಗಬೇಕಾದ ಪರಿಸ್ಥಿತಿ ಬಂತು. ನಮ್ಮದು ಬಾಂಬೆ ಟೀಂ ಅಲ್ಲ. ಬಾಂಬೆ ಟೀಂ ಎಂಬ ಹೆಸರನ್ನು ಮಾದ್ಯಮದವರೇ ಸೃಷ್ಟಿ ಮಾಡಿದ್ದು ಎಂದು ಹೇಳಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಸುಧಾಕರ್ ಅವರಿಗೆ ಲಿಫ್ಟ್ ನಲ್ಲಿ ಹಾಕಿಕೊಂಡು ಹೊಡೆದಿದ್ದಾರೆ. ಬಳಿಕ ಖರ್ಗೆ ಆಫೀಸ್ ಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದರು. ಇದರಿಂದ ಭಯಗೊಂಡು ಇಲ್ಲಿದ್ದರೆ ನಮಗೂ ಏನಾದರೂ ಮಾಡುತ್ತಾರೆ ಎಂಬ ಆತಂಕದಿಂದ ಮುಂಬೈಗೆ ಹೋದೆವು. ಈಗಲೂ ಕೂಡ ನಮ್ಮ ಟೀಂ ನಲ್ಲಿ ಯಾವುದೇ ರೀತಿಯ ಒಡಕಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ ಎಂದು ಹೇಳಿದರು.