alex Certify ಯಡಿಯೂರಪ್ಪನವರ ಬದುಕು ಬಾಲನಾಗಮ್ಮನ ಕಥೆಯಂತಾಗಿದೆ – ಎಲ್ಲಾ ವಿಚಾರವನ್ನು ಪುಸ್ತಕ ರೂಪದಲ್ಲಿ ಹೊರತರುವೆ ಎಂದ ಹೆಚ್. ವಿಶ್ವನಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಡಿಯೂರಪ್ಪನವರ ಬದುಕು ಬಾಲನಾಗಮ್ಮನ ಕಥೆಯಂತಾಗಿದೆ – ಎಲ್ಲಾ ವಿಚಾರವನ್ನು ಪುಸ್ತಕ ರೂಪದಲ್ಲಿ ಹೊರತರುವೆ ಎಂದ ಹೆಚ್. ವಿಶ್ವನಾಥ್

ಬೆಂಗಳೂರು: 78 ವರ್ಷದ ಯಡಿಯೂರಪ್ಪನವರಿಗೆ ಅಧಿಕಾರದ ವ್ಯಾಮೋಹವಿರುವಾಗ 77 ವರ್ಷದ ನನಗೆ ಇರುವುದಲ್ಲಿ ತಪ್ಪೇನು? ಎಂದು ಬಿಜೆಪಿ ಎಂ ಎಲ್ ಸಿ ಹೆಚ್.ವಿಶ್ವನಾಥ್ ಮತ್ತೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಶ್ವನಾಥ್, ನಾನು ನಾಯಕತ್ವದ ವಿರುದ್ಧ ಧ್ವನಿ ಎತ್ತಿ ಪಕ್ಷ ಬದಲಿಸಿದ್ದೇನೆ ಹೊರತು ನಾನು ಪಕ್ಷಾಂತರಿಯಲ್ಲ. ಬಾಂಬೆ ಡೇಸ್ ಪುಸ್ತಕದಲ್ಲಿ ಎಲ್ಲಾ ವಿಚಾರಗಳನ್ನು, ಸರ್ಕಾರ ರಚನೆಯ ಪ್ರಹಸನವನ್ನೂ ಬರೆಯುತ್ತೇನೆ. ಇನ್ನು ನಾಲ್ಕೈದು ಅಧ್ಯಾಯಗಳು ಬಾಕಿಯಿದೆ ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ ಕುಟುಂಬ ರಾಜಕಾರಣ ಅತಿಯಾಗಿದೆ. ಪ್ರಧಾನಿ ಮೋದಿ ಕುಟುಂಬ ರಾಜಕಾರಣ ಟೀಕಿಸುತ್ತಾರೆ. ಆದರೆ ಬಿ.ಎಸ್.ವೈ. ಪುತ್ರ ವಿಜಯೇಂದ್ರ ರಾಜಕಾರಣದಲ್ಲಿಲ್ವಾ? ಬಿ.ಎಸ್.ವೈ. ಹೆಣ್ಣುಮಕ್ಕಳೂ ರಾಜಕಾರಣದಲ್ಲಿ ಭಾಗಿಯಾಗುತ್ತಿಲ್ವಾ? ಈಶ್ವರಪ್ಪನವರ ಕುಟುಂಬವೂ ರಾಜಕಾರಣದಿಂದ ಹೊರತಾಗಿಲ್ಲ. ಕುಟುಂಬ ರಾಜಕಾರಣವೇ ಭ್ರಷ್ಟಾಚಾರವನ್ನು ಪೋಷಿಸುತ್ತದೆ. ಅಮಿತ್ ಶಾ ಮಗನ ವಿಚಾರದಲ್ಲೂ ಮೋದಿ ಬೇಸರಗೊಂಡಿದ್ದಾರೆ ಎಂದರು.

ಇನ್ನು ಯಡಿಯೂರಪ್ಪನವರ ಬದುಕು ವಿಜಯೇಂದ್ರ ಕೈಲಿದೆ. ಯಡಿಯೂರಪ್ಪನವರ ಬದುಕು ಬಾಲನಾಗಮ್ಮನ ಕಥೆಯಂತಾಗಿದೆ. ಇಂದಿಗೂ ನನಗೆ ಯಡಿಯೂರಪ್ಪ ಬಗ್ಗೆ ಕಳಕಳಿಯಿದೆ. ಯಡಿಯೂರಪ್ಪ ನಾಲಿಗೆ ಕಳೆದುಕೊಂಡ ನಾಯಕನಾಗಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳದೇ ಭ್ರಷ್ಟರಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...