ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮಂತ್ರಿ ಮಂಡಲದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಬಿಜೆಪಿ ಸಚಿವರು-ಶಾಸಕರ ನಡುವೆಯೇ ಹೋರಾಟ ನಡೆಯುತ್ತಿದೆ. ಇದರಿಂದ ರಾಜ್ಯದ ಜನತೆ ಸೋಲುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಡಕೋಟಾ ಸರ್ಕಾರ, ಅಸಹಾಯಕ ಮುಖ್ಯಮಂತ್ರಿ, ಬ್ಲಾಕ್ ಮೇಲ್ ಮಂತ್ರಿ ಮಂಡಲ, ಪುಕ್ಕಲು ಸಂಸದರು, ತಿಕ್ಕಲು ಸಚಿವರು, ಆರ್ಡಿನರಿ ಶಾಸಕರು, ಭ್ರಷ್ಟಾಚಾರದ ಆಡಳಿತ… ಶಾಸಕರಿಗೆ ಅನುದಾನವಿಲ್ಲ. ಸಚಿವರಿಗೆ ಖಾತೆ ನಿಭಾಯಿಸುವ ಯೋಗ್ಯತೆ ಇಲ್ಲ ಎಂದು ಟಾಂಗ್ ನೀಡಿದೆ.
ಸುಧಾಕರ್ ದೇವಲೋಕದಿಂದ ಇಳಿದು ಬಂದಿದ್ದಾರಾ….?: ನನ್ನ ಇನ್ನೊಂದು ಮುಖ ತೋರಿಸಬೇಕಾಗುತ್ತೆ….. ರೇಣುಕಾಚಾರ್ಯ ಆಕ್ರೋಶ
ನಿಮ್ಮವರೇ ನಿಮ್ಮ ಬಂಡವಾಳ, ಅಯೋಗ್ಯತನವನ್ನು ಹೊರಹಾಕುತ್ತಿದ್ದಾರೆ. ಮೊದಲು ನಿಮ್ಮ ತೂತು ಮುಚ್ಚಿಕೊಂಡು ನೆಟ್ಟಗೆ ಆಡಳಿತ ನಡೆಸಿ, ನಿಮ್ಮಿಂದ ಜನತೆ ನೆಮ್ಮದಿ ಕಳೆದಿದೆ. ಸಮನ್ವಯತೆಯಿಲ್ಲ, ಜನಪರ ಯೋಜನೆಯಿಲ್ಲ. ಶಾಸಕರಿಗೆ ಸ್ವತಂತ್ರವಿಲ್ಲ, ಅನುದಾನವೂ ಇಲ್ಲ. ಬಿಜೆಪಿ vs ಬಿಜೆಪಿ ಕಚ್ಚಾಟದಲ್ಲಿ ರಾಜ್ಯ ನಲುಗಿ ಹೋಗಿದೆ ಎಂದು ಕಿಡಿಕಾರಿದೆ.