ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಹಿರೇನಾಗವೇಲಿಯಲ್ಲಿ ಜಿಲೆಟಿನ್ ಸ್ಫೋಟಕ್ಕೆ 6 ಜನರು ಮೃತಪಟ್ಟಿದ್ದು, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸಚಿವ ಮುರುಗೇಶ್ ನಿರಾಣಿ, ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಭ್ರಮರವರ್ಷಿಣಿ ಕಂಪನಿಗೆ ಸೇರಿದ ಕಲ್ಲು ಕ್ವಾರಿ ಇದಾಗಿದ್ದು, ಇದಕ್ಕೆ ಮೂವರು ಮಾಲೀಕರಿದ್ದಾರೆ. ಕ್ರಷರ್ ಮಾಲಿಕರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ ಎಂದರು.
ಹಿರೇನಾಗವೇಲಿ ಸ್ಪೋಟ: ಮೃತರ ಸಂಖ್ಯೆ 6 ಕ್ಕೆ ಏರಿಕೆ – ಸ್ಥಳಕ್ಕೆ ಸಚಿವ ಸುಧಾಕರ್ ಭೇಟಿ
ಇನ್ನು ಮುಂದೆ ಕ್ವಾರಿಯಲ್ಲಿ ಅನುಮತಿ ಕೊಟ್ಟವರಿಗೆ ಮಾತ್ರ ಸ್ಫೋಟಕ್ಕೆ ಅವಕಾಶ ನೀಡಲಾಗುತ್ತದೆ. ಮೈನಿಂಗ್ ಮಾಡಲು ಹಾಗೂ ಕಲ್ಲು ಸ್ಪೋಟಕ್ಕೆ ತರಬೇತಿ ಪಡೆಯುವುದನ್ನು ಇಲಾಖೆ ವತಿಯಿಂದ ಕಡ್ಡಾಯ ಮಾಡಲಾಗುತ್ತದೆ. ಈ ಬಗ್ಗೆ ಶೀಘ್ರದಲ್ಲಿ ಆದೇಶ ಹೊರಡಿಸುವುದಾಗಿ ತಿಳಿಸಿದರು.