ನವದೆಹಲಿ: ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಆದರೆ ಈ ನಡುವೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸರ್ಕಾರಗಳಿಗೆ ಪತ್ರವೊಂದನ್ನು ಬರೆದಿದ್ದು, ಲಸಿಕೆಯನ್ನು ರಾಜ್ಯ ಸರ್ಕಾರವೇ ಖರೀದಿ ಮಾಡಿ ನೀಡಬೇಕು ಎಂದು ಹೇಳಿದೆ.
ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಗಳಿಗೆ ಪೂರೈಸಿರುವ ಲಸಿಕೆಗಳನ್ನು ನೀಡುವಂತಿಲ್ಲ. ರಾಜ್ಯ ಸರ್ಕಾರಗಳೇ ಲಸಿಕಾ ತಯಾರಿಕಾ ಕಂಪನಿಗಳಿಂದ ವ್ಯಾಕ್ಸಿನ್ ಖರೀದಿಸಿ ನೀಡಬೇಕು. ರಾಜ್ಯಗಳ ಬಳಿ ಈಗಾಗಲೇ ಸಂಗ್ರಹವಾಗಿರುವ ಲಸಿಕೆ ಆದ್ಯತಾ ವರ್ಗಕ್ಕೆ ಮಾತ್ರ ನೀಡಬೇಕು ಎಂದು ಸ್ಪಷ್ಟಪಡಿಸಿದೆ.
ಬಸವರಾಜ್ ಹೊರಟ್ಟಿಗೆ ಕೊರೊನಾ ಸೋಂಕು; ಕಿಮ್ಸ್ ಗೆ ದಾಖಲು
ಇದೇ ವೇಳೆ ಲಸಿಕಾ ತಯಾರಿಕಾ ಕಂಪನಿಗಳಾದ ಭಾರತ್ ಬಯೋಟೆಕ್ ಹಾಗೂ ಸಿರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮೇ 15ರ ಬಳಿಕ ಲಸಿಕೆ ನೀಡುವುದಾಗಿ ತಿಳಿಸಿವೆ. ಹಾಗಾಗಿ ಭಾರತ ಬಯೋಟೆಕ್ ಹಾಗೂ ಎಸ್ ಐ ಐ ನೀಡುವ ಲಸಿಕೆ ಪಡೆಯಬೇಕೆಂದರೆ ಮೇ 15ರವರೆಗೆ ಕಾಯಲೇಬೇಕಾದ ಅನಿವಾರ್ಯ ಎದುರಾಗಿದೆ. ಹಾಗಾಗಿ ಮೇ 1ರಿಂದ 18 ವರ್ಷ ಮೇಲ್ಪಟ್ಟರಿಗೆ ಲಸಿಕೆ ಸಿಗುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ.