ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ಚರ್ಚೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗಿಯಾಗಿಲ್ಲ ಎಂದು ಕಿಡಿಕಾರಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಾನು ಸೋಮವಾರದಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಿದ್ದರು. ನಿನ್ನೆ ಸಿಎಂ ಭೇಟಿಯಾದಾಗ ಇಂದು ಮೀಸಲಾತಿ ಹೋರಾಟದ ಬಗ್ಗೆ ಮಾತನಾಡುತ್ತೇನೆ. ಎಲ್ಲಾ ವಿಧದ ಸಹಕಾರ ಇದೆ ಎಂದು ಹೇಳಿದ್ದರು. ಆದರೆ ಇಂದು ಅವರು ಚರ್ಚೆಯಲ್ಲಿ ಭಾಗಿಯಾಗಿಲ್ಲ. ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅವರಿಗೆ ನಮ್ಮ ಸಮುದಾಯದ ಬಗ್ಗೆ ಪ್ರೀತಿಯಿದೆ. ಆದರೆ ನಮ್ಮ ಸಮುದಾಯದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಯಡಿಯೂರಪ್ಪನವರಿಗೆ ಪ್ರೀತಿ ಇಲ್ಲ ಎಂದರೆ ಹೇಗೆ? ಈಗ ಸಿಎಂ ನಾಪತ್ತೆಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಾಹುಕಾರ್ ಸಿಡಿ’ ಬಗ್ಗೆ ಸಚಿವ ಸೋಮಶೇಖರ್ ಹೊಸ ಬಾಂಬ್
ಹಿಂದೆ ಬಲಿಜ ಸಮುದಾಯಕ್ಕೆ ಮೀಸಲಾತಿ ನೀಡಿದ್ದಾರೆ. ಸಮುದಾಯದಲ್ಲಿ ನಾಯಕತ್ವ ಬೆಳೆದರೆ ಕಷ್ಟ ಎಂಬ ಅರಿವಿರಬೇಕು. ಅದಕ್ಕೆ ವ್ಯವಸ್ಥಿತವಾಗಿ ಸಿಎಂ ಈ ರೀತಿ ಮಾಡಿರಬಹುದು. ಆದರೆ ಭರವಸೆ ಕೊಟ್ಟು ಈಗ ಸದನದಿಂದ ನಾಪತ್ತೆಯಾಗಿರುವುದು ಎಷ್ಟು ಸೂಕ್ತ ಎಂದು ಕಿಡಿಕಾರಿದರು.