ವಿಜಯಪುರ: ಸರ್ಕಾರದ ವಿರುದ್ಧ, ಸಿಎಂ ವಿರುದ್ಧ ಹೇಳಿಕೆ ನೀಡದಂತೆ ಹೈಕಮಾಂಡ್ ತಾಕೀತು ಮಾಡಿ, ನೋಟೀಸ್ ನೀಡಿದರೂ ಜಗ್ಗದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮತ್ತೆ ಸಿಎಂ ವಿರುದ್ಧ ಗುಡುಗಿದ್ದಾರೆ.
ನಮ್ಮ ತಂದೆ ಹಾವು-ಚೇಳುಗಳ ಜೊತೆ ಕೆಲಸ ಮಾಡುತ್ತಿದ್ದಾರೆ ಎಂಬ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಹಾವು-ಚೇಳುಗಳು ಸಿಎಂ ಮನೆಯಲ್ಲಿಯೇ ಇವೆ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕನ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ಘೋಷಿಸಿದ್ದ ಕಾಂಗ್ರೆಸ್ ನಾಯಕಿ; ಹಣವನ್ನು ಬಡ ಮಕ್ಕಳಿಗೆ ಹಂಚಿದ ಮಾಜಿ ಕಾರ್ಪೊರೇಟರ್
ಹಾವು-ಚೇಳುಗಳು ವಿಜಯೇಂದ್ರ ಹಾಗೂ ಕುಟುಂಬದವರು. ಯಡಿಯೂರಪ್ಪನವರ ಇಡೀ ಕುಟುಂಬ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿಯೇ ಇದೆ. ಬಿ ಎಸ್ ವೈ ಸಿಎಂ ಆಗುವ ಮೊದಲು ಯಾರೂ ಜೊತೆಯಲ್ಲಿ ಇರಲಿಲ್ಲ. ವಿಜಯೇಂದ್ರ ವ್ಯಾಮೋಹದ ಪರಾಕಾಷ್ಠೆ ತಲುಪಿದ್ದಾರೆ ಎಂದು ವಾಗ್ದಾಳಿ ನಡೆಸಿದರು.