ಬೆಂಗಳೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಮತ್ತೆ ಅಹಿಂದ ಹೋರಾಟಕ್ಕೆ ಸಿದ್ದತೆ ನಡೆಸಿದ್ದಾರಾ ಇಂಥದ್ದೊಂದು ಅನುಮಾನ ಆರಂಭವಾಗಿದೆ.
ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಭೇಟಿ ಬೆನ್ನಲ್ಲೇ ಈ ವಿಚಾರಕ್ಕೆ ಇನ್ನಷ್ಟು ಪುಷ್ಠಿ ದೊರೆತಿದೆ.
ಭೇಟಿ ಬೆನ್ನಲ್ಲೇ ಇದೀಗ ಹೆಚ್.ಸಿ.ಮಹದೇವಪ್ಪ ಮಾಡಿರುವ ಪೋಸ್ಟ್ ಅಹಿಂದ ಹೋರಾಟದ ಕುರಿತು ಹೊಸ ಚರ್ಚೆ ಹುಟ್ಟು ಹಾಕಿದೆ. ನಾನು ಮತ್ತು ಸಿದ್ದರಾಮಯ್ಯ 1989ರಿಂದಲೂ ಆತ್ಮೀಯರು. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಕೇವಲ ಅಂತೆಕಂತೆ ಅಷ್ಟೇ. ಸಮಯ ಬಂದಾಗಲೆಲ್ಲಾ ನಾವು ಹೋರಾಟ ಮಾಡುತ್ತೇವೆ.
ಈ ಸೇವೆಗಳಿಗೂ ಕಡ್ಡಾಯವಾಗ್ತಿದೆ ‘ಆಧಾರ್’
ಪ್ರಜಾಪ್ರಭುತ್ವಕ್ಕೆ ಧಕ್ಕೆ ಆದಾಗ ಹೋರಾಟ ಸೃಷ್ಟಿಯಾಗುತ್ತೆ. ಅಂತಹ ಚಳವಳಿಗಳಿಗೆ ನಾವು ಬೆಂಬಲ ನೀಡುತ್ತೇವೆ. ಆದರೆ ಅಹಿಂದ ವೇದಿಕೆಯನ್ನು ನಾವೇ ಸೃಷ್ಟಿ ಮಾಡುವುದಿಲ್ಲ! ರಾಜಕೀಯ ವಲಯದಲ್ಲಿ ಜನಪರ ಧ್ವನಿ ಕ್ಷೀಣಿಸುತ್ತಿದೆ. ನಾನು ಸಿದ್ದರಾಮಯ್ಯ ಹೋರಾಟವನ್ನು ಸಂಘಟಿಸುವ ಸಾಮಾಜಿಕ ನ್ಯಾಯದ ಕನಸನ್ನು ಸಾಕಾರಗೊಳಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.