ಹೈದರಾಬಾದ್: ರಷ್ಯಾದ ಸ್ಪುಟ್ನಿಕ್-ವಿ ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಭಾರತಕ್ಕೆ ಆಗಮಿಸಿದ್ದು, ರಷ್ಯಾದಿಂದ ವ್ಯಾಕ್ಸಿನ್ ಹೊತ್ತ ವಿಮಾನ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆ.
ದೇಶದಲ್ಲಿ ಮೂರನೇ ಹಂತದಲ್ಲಿ ಆರಂಭವಾಗುವ ಲಸಿಕೆ ನೀಡಿಕೆಯಲ್ಲಿ ಸ್ಪುಟ್ನಿಕ್-ವಿ ಲಸಿಕೆ ಬಳಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಭಾರತಕ್ಕೆ ಸ್ಪುಟ್ನಿಕ್ ಲಸಿಕೆ ಆಗಮನವಾಗಿದೆ.
ಕೊರೊನಾ ತಡೆಗೆ ಪ್ರಾಮಾಣಿಕ ಪ್ರಯತ್ನ ಮಾಡಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಿ; ಸಿದ್ದರಾಮಯ್ಯ ಆಗ್ರಹ
ಮೊದಲ ಬ್ಯಾಚ್ ನಲ್ಲಿ 1.5 ಲಕ್ಷ ಡೋಸ್ ಗಳು ಆಗಮಿಸಿದ್ದು, ಉಳಿದ 3 ಮಿಲಿಯನ್ ಡೋಸ್ ಗಳು ಈ ತಿಂಗಳಾಂತ್ಯಕ್ಕೆ ಬರಲಿದೆ. ಏಪ್ರಿಲ್ 13ರಂದು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ದೇಶದಲ್ಲಿ ಕೊರೊನಾ ಸೋಂಕಿಗೆ ಸ್ಪುಟ್ನಿಕ್-ವಿ ಲಸಿಕೆ ಬಳಸಲು ಅನುಮೋದನೆ ನೀಡಿದೆ.