ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸದ ನಡುವೆ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದೆ. 300ಕ್ಕೂ ಹೆಚ್ಚು ಜನರಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿದೆ. ಹೀಗಾಗಿ ಜಿಲ್ಲಾಸ್ಪತ್ರೆಗಳಲ್ಲೂ ಫಂಗಸ್ ಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಬಗ್ಗೆ ಸಮಿತಿ ನೀಡಿದ ಮಾಹಿತಿ ಪ್ರಕಾರ ದೀರ್ಘಕಾಲ ಒಂದೇ ಮಾಸ್ಕ್ ಬಳಸುವುದರಿಂದ, ಆಕ್ಸಿಜನ್ ಸೋರ್ಸ್ ನಿಂದ ಬ್ಲ್ಯಾಕ್ ಫಂಗಸ್ ಬರುತ್ತದೆ. ಹಾಗಾಗಿ ಒಂದೇ ಮಾಸ್ಕ್ ಬಳಕೆ ಮಾಡಬಾರದು. ಅತಿಯಾದ ಸ್ಟಿರಾಯ್ಡ್ ಬಳಕೆಯಿಂದಾಗಿ, ಐಸಿಯು, ವೆಂಟಿಲೇಟರ್ ಬಳಸುವ ವಿಧಾನದಲ್ಲಿ ಸ್ವಚ್ಛತೆ ಇಲ್ಲದಿರುವುದು, ಡಯಾಬಿಟಿಸ್ ಇರುವವರಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ನಿಂದ ಸಾವನ್ನಪ್ಪಿದ ತಾಯಿ; ನಾಲ್ಕೇ ದಿನಕ್ಕೆ ವೈದ್ಯ ಮಗನೂ ಕ್ರೂರಿ ಕೊರೊನಾಗೆ ಬಲಿ; ಕರುಳು ಹಿಂಡುತ್ತಿದೆ ಪತ್ನಿ-ಮಗುವಿನ ಕಣ್ಣೀರ ಕಥೆ
ಬ್ಲ್ಯಾಕ್ ಫಂಗಸ್ ಬಗ್ಗೆ ಮುಂಜಾಗೃತೆ ಕೈಗೊಳ್ಳುವುದು ಅನಿವಾರ್ಯ, ಆಸ್ಪತ್ರೆಗಳಲ್ಲಿ ಕಟ್ಟಡ ನಿರ್ಮಾಣ, ಕಟ್ಟಡ ರಿನೋವೇಷನ್ ಮಾಡುವಂತಿಲ್ಲ. ಕೋವಿಡ್ ವಾರ್ಡ್ ಗಳಿಗೆ ಬೇರೆಯವರಿಗೆ ಪ್ರವೇಶ ನೀಡಬಾರದು, ಪ್ರತಿ ಪಾಳಿಯಲ್ಲಿ ಆಸ್ಪತ್ರೆ ಫ್ಲೋರ್, ವಾರ್ಡ್ ಸ್ಯಾನಿಟೈಸ್ ಮಾಡಬೇಕು. ರೋಗಿಗಳನ್ನು ಶುಚಿಯಾಗಿಡಬೇಕು, ಸ್ಟಿರಾಯ್ಡ್ ಅಧಿಕ ಬಳಕೆ ಮಾಡಬಾರದು. ಕೊರೊನಾದಿಂದ ಗುಣಮುಖರಾದ ಮೇಲೆ ENT ಸ್ಪೆಷಲಿಸ್ಟ್ ಹಾಗೂ ಫಿಸಿಶಿಯನ್ ಮತ್ತೊಮ್ಮೆ ರೋಗಿಯನ್ನು ಪರೀಕ್ಷಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ವಿವರಿಸಿದರು.
ಅಮೆಜಾನ್ ಪ್ರೈಮ್ ಸದಸ್ಯರಿಗೆ ಇಲ್ಲಿದೆ ಮಹತ್ವದ ಮಾಹಿತಿ
ಇನ್ನು ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ರಾಜ್ಯದಲ್ಲಿ ಔಷಧಿ ಕೊರತೆಯಿರುವುದು ನಿಜ. ಕೇಂದ್ರ ಸರ್ಕಾರದಿಂದ 1,500 ವಯಲ್ಸ್ ಬಿಡುಗಡೆಯಾಗಿದೆ. ನಾವು 20 ಸಾವಿರ ವಯಲ್ಸ್ ಗೆ ಬೇಡಿಕೆ ಇಟ್ಟಿದ್ದೇವೆ. ಹೆಚ್ಚು ಔಷಧ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ ಎಂದರು.