ಬೆಂಗಳೂರು: ಎನ್ ಐ ಎ (ನ್ಯಾಷನಲ್ ಇನ್ ವೆಸ್ಟಿಗೇಷನ್ ಏಜೆನ್ಸಿ) ಅಧಿಕಾರಿಗಳು ಬೆಂಗಳೂರು, ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಐದು ಜನ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಎರಡು ಕಡೆ, ಕೇರಳದ ಕಣ್ಣೂರು, ಕೊಚ್ಚಿ ಸೇರಿದಂತೆ ನಾಲ್ಕು ಕಡೆಗಳಲ್ಲಿ ಹಾಗೂ ದೆಹಲಿ ಸೇರಿದಂತೆ ದೇಶದ 7 ಸ್ಥಳಗಳಲ್ಲಿ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ್ದು, ಐವರನ್ನು ಬಂಧಿಸಿದ್ದಾರೆ. ಬಂಧಿತ ಉಗ್ರರು ಐ ಎಸ್ ಐ ಜೊತೆ ನಂಟು ಹೊಂದಿದ್ದು ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಸಂಕಷ್ಟದಲ್ಲಿದ್ದ ಶಿಕ್ಷಕನಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಮಾಜಿ ವಿದ್ಯಾರ್ಥಿ…!
ಎನ್ ಐ ಎ ಹಲವು ದಿನಗಳಿಂದ ಶಂಕಿತರ ಮೇಲೆ ನಿಗಾ ವಹಿಸಿದ್ದು, ಇದೀಗ ಸೂಕ್ತ ಕಾರ್ಯಾಚರಣೆ ನಡೆಸಿ ಬಂಧಿಸಿದೆ.