ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಬ್ರಿಟನ್ ಭೂತ ಅಪ್ಪಳಿಸಿದ್ದು, ಮೂವರಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವಸಂತಪುರದ ಇಡೀ ಅರ್ಪಾರ್ಟ್ ಮೆಂಟ್ ನ್ನೇ ಸೀಲ್ ಡೌನ್ ಮಾಡಲಾಗಿದೆ.
ಬ್ರೀಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ ತಾಯಿ ಹಾಗೂ ಮಗಳಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆಯಾಗಿದೆ. ಇಬ್ಬರೂ ವಸಂತಪುರದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದು, ಈ ಹಿನ್ನೆಲೆಯಲ್ಲಿ ಇಡೀ ಅಪಾರ್ಟ್ ಮೆಂಟ್ ನಿವಾಸಿಗಳನ್ನು ಬೇರೆಡೆಗೆ ಶಿಫ್ಟ್ ಮಾಡಿ ಕ್ವಾರಂಟೈನ್ ಮಾಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದರು. ಆದರೆ ಅಪಾರ್ಟ್ ಮೆಂಟ್ ನಿವಾಸಿಗಳು ಇದಕ್ಕೆ ಒಪ್ಪಿಲ್ಲ. ಕೋವಿಡ್ ನಿಯಮ ಪಾಲನೆಗೆ ನಾವು ಸಿದ್ಧರಿದ್ದು, ಅಪಾರ್ಟ್ ಮೆಂಟ್ ನ ನಮ್ಮ ನಮ್ಮ ಮನೆಗಳಲ್ಲೇ ಕ್ವಾರಂಟೈನ್ ಆಗುತ್ತೇವೆ. ಸ್ವಯಂ ಗೃಹ ಬಂಧನಕ್ಕೂ ಸಿದ್ದ ಆದರೆ ಬೇರೆಡೆ ಶಿಫ್ಟ್ ಆಗಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಅಂತಿಮವಾಗಿ ಬಿಬಿಎಂಪಿ ಅಧಿಕಾರಿಗಳು ಇಡೀ ಅಪಾರ್ಟ್ ಮೆಂಟ್ ಸೀಲ್ ಡೌನ್ ಮಾಡಿದ್ದು, ಅಪಾರ್ಟ್ ಮೆಂಟ್ ಗೇಟಿಗೂ ಬೀಗ ಹಾಕಿದ್ದಾರೆ. ಅಪಾರ್ಟ್ ಮೆಂಟ್ ನ 38 ನಿವಾಸಿಗಳನ್ನು 14 ದಿನಗಳ ಕಾಲ ಅವರವರ ಮನೆಗಳಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಅಪಾರ್ಟ್ ಮೆಂಟ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಸ್ಯಾನಿಟೈಸ್ ಮಾಡಿ ಸೀಲ್ ಡೌನ್ ಮಾಡಲಾಗಿದ್ದು, ಜನರು ಓಡಾಟ ನಡೆಸದಂತೆ ಬಿತ್ತಿಪತ್ರ ಅಂಟಿಸಲಾಗಿದೆ.