ಬೆಂಗಳೂರು; ಕೊರೊನಾ ಹೆಮ್ಮಾರಿಯಿಂದ ನಲುಗಿರುವ ರಾಜ್ಯದಲ್ಲಿ ಇದೀಗ ಬ್ಲ್ಯಾಕ್ ಫಂಗಸ್ ಆರ್ಭಟ ಆರಂಭವಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ಬಲಿಯಾಗಿದ್ದಾರೆ.
ಚಿಕ್ಕಪೇಟೆಯ 64 ವರ್ಷದ ವೃದ್ಧ ಹಾಗೂ ಕೊಟಾಲಂ ನಿವಾಸಿ 54 ವರ್ಷದ ಮಹಿಳೆ ಬ್ಲ್ಯಾಕ್ ಫಂಗಸ್ ನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇನ್ನು ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿರುವ 13 ಜನರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ 20 ಜನರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಬ್ಲಾಕ್ ಫಂಗಸ್ ಅಟ್ಟಹಾಸ; ಕೋಲಾರದಲ್ಲಿ 12 ಜನರಲ್ಲಿ ಕಪ್ಪು ಶಿಲೀಂಧ್ರ ಪತ್ತೆ
ಒಟ್ಟಾರೆ ಕೊರೊನಾ ಅಟ್ಟಹಾಸದ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ ಆತಂಕ ಹೆಚ್ಚುತ್ತಿದ್ದು, ಚಿಕಿತ್ಸೆಗೆ ಔಷಧಿ ಕೊರತೆ ಕೂಡ ಆರಂಭವಾಗಿರುವುದು ತಲೆನೋವಾಗಿ ಪರಿಣಮಿಸಿದೆ.