alex Certify BIG NEWS: ಬೆಂಗಳೂರಿಗೆ ಕೊರೊನಾಘಾತ; ಹೊಸ ದಾಖಲೆಗೆ ಬೆಚ್ಚಿಬಿದ್ದ ಆರೋಗ್ಯ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಿಗೆ ಕೊರೊನಾಘಾತ; ಹೊಸ ದಾಖಲೆಗೆ ಬೆಚ್ಚಿಬಿದ್ದ ಆರೋಗ್ಯ ಇಲಾಖೆ

ಬೆಂಗಳೂರು: ಕೊರೊನಾ ಎರಡನೇ ಅಲೆ ಅತಿ ವೇಗವಾಗಿ ಹರಡುತ್ತಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕ್ಷಣ ಕ್ಷಣಕ್ಕೂ ಆತಂಕವನ್ನು ಹೆಚ್ಚಿಸುತ್ತಿದೆ. ಇಡೀ ದೇಶದಲ್ಲಿಯೇ ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣ ದಾಖಲಾಗಿದ್ದು, ಆರೋಗ್ಯ ಇಲಾಖೆಯೇ ಬೆಚ್ಚಿಬಿದ್ದಿದೆ.

ಈಗಾಗಲೇ ಬೆಂಗಳೂರಿನಲ್ಲಿ ಸೋಂಕಿತರಿಗೆ ಆಕ್ಸಿಜನ್, ಐಸಿಯು, ಬೆಡ್ ಕೊರತೆಯುಂಟಾಗಿದ್ದು, ಪ್ರಾಣವಾಯುಗಾಗಿ ರೋಗಿಗಳು ಪರದಾಡಿ ಸಾವನ್ನಪ್ಪುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಕೂಡ ರಾಜಧಾನಿಯಲ್ಲಿ ಕೋವಿಡ್ ಆಕ್ಟಿವ್ ಕೇಸ್ ಗಳು ಹೆಚ್ಚುತ್ತಿವೆ. ಇದೀಗ ಬೆಂಗಳೂರಿನಲ್ಲಿ 1,49,624 ಸಕ್ರಿಯ ಪ್ರಕರಣಗಳು ದಾಖಲಾಗಿದೆ.

ಆಸ್ಪತ್ರೆಗೆ ಹೋಗುವವರಿಗೆ ಉಚಿತ ಪ್ರಯಾಣ…! ಆಟೋ ಚಾಲಕನಿಂದ‌‌ ಮಾನವೀಯ ಕಾರ್ಯ

ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 16,662 ಜನರಲ್ಲಿ ಸೋಂಕು ಪತೆಯಾಗಿತ್ತು. ಆದರೀಗ ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಒಂದೂವರೆ ಲಕ್ಷ ಜನರು ಸೋಂಕು ಪೀಡಿತರಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...