ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಇದರ ನಿಯಂತ್ರಣಕ್ಕಾಗಿ ಸರ್ಕಾರ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಗೊಳಿಸಿದ್ದು, ಇದೀಗ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯ ಹಿರಿಯ ನಾಗರೀಕರು, ಅಸ್ವಸ್ಥರು, ರೋಗಲಕ್ಷಣ ಇರುವ ಪ್ರಥಮಿಕ ಸಂಪರ್ಕದವರು ತಮ್ಮ ವಲಯದಲ್ಲಿ ಕಾರ್ಯ ನಿರ್ವಹಿಸುವ ಮೊಬೈಲ್ ಟೆಸ್ಟಿಂಗ್ ವಾಹನಕ್ಕೆ ಕರೆ ಮಾಡುವ ಮೂಲಕ ಮನೆ ಬಾಗಿಲಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ವಲಯವಾರು ಸಹಾಯವಾಣಿ ಇಂತಿದ್ದು, ಯಲಹಂಕ- 080-28560696/ 8792032820/5180, ಮಹದೇವಪುರ- 080-23010101/102, ಬೊಮ್ಮನಹಳ್ಳಿ- 8548883334/ 8970002228, ಆರ್ ಆರ್ ನಗರ- 080-2600208, ದಕ್ಷಿಣ ವಲಯ- 7022724772, ಪೂರ್ವ ವಲಯ -9900094042, ಪಶ್ಚಿಮ ವಲಯ 080-68248454/ 7204179723 ಕರೆ ಮಾಡಬಹುದಾಗಿದೆ.
ಗಂಟಲು ದ್ರವ (ಸ್ವ್ಯಾಬ್) ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಯಾವುದೇ ವ್ಯಕ್ತಿ ಫಲಿತಾಂಶ ಲಭ್ಯವಾಗುವವರೆಗೆ ಮನೆಯಲ್ಲೇ ಪ್ರತ್ಯೇಕತೆ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ನಿಯಮ ಉಲ್ಲಂಘಿಸಿದರೆ ಅವರಿಗೆ ಸಾಂಕ್ರಾಮಿಕ ರೋಗ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು. ಆಪ್ತಮಿತ್ರ-ಕೋವಿಡ್- 19 ಸಹಾಯವಾಣಿ, ಟೆಲಿಮೆಡಿಸಿನ್ ಮತ್ತು ಆಸ್ಪತ್ರೆಗೆ ಉಲ್ಲೇಖಿಸಲು-14410, ಆಂಬುಲೆನ್ಸ್ ಸೇವೆಗೆ -108, ಆಸ್ಪತ್ರೆ ನಿರಾಕರಣೆ ಸಂಬಂಧದ ಕುಂದು ಕೊರತೆಗಾಗಿ-1912, ಸಾಮಾನ್ಯ ಆರೋಗ್ಯ ಸಮಸ್ಯೆ ಕುರಿತ ಮಾಹಿತಿಗಾಗಿ -104 ಸಂಖ್ಯೆಗಳಿಗೆ ಸಾರ್ವಜನಿಕರು ಕರೆ ಮಾಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.