ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಹೊಸ ಬಾಂಬ್ ಸಿಡಿಸಿರುವ ಕಂದಾಯ ಸಚಿವ ಆರ್.ಅಶೋಕ್, ನೂರಕ್ಕೆ ನೂರರಷ್ಟು ನಾಯಕತ್ವ ಬದಲಾವಣೆ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದೆ ಹೊಸ ಮಾರ್ಗಸೂಚಿ
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಅಶೋಕ್, ನಾಯಕತ್ವ ಬದಲಾವಣೆ ವಿಚಾರವಾಗಿ ಕೆಲ ಸಚಿವರು, ಶಾಸಕರು ಪ್ರಯತ್ನಿಸುತ್ತಿದ್ದಾರೆ. ದೆಹಲಿಯಲ್ಲಿ ಅನೇಕ ಸಚಿವರು, ಶಾಸಕರು ಬೀಡುಬಿಟ್ಟಿರುವುದು ನಿಜ. ಈ ಬಗ್ಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ್ದು, ಅಲ್ಲಿಯೂ ಕೆಲ ಸಚಿವರು ಭಾಗಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಶೇ.100ರಷ್ಟು ನಾಯಕತ್ವ ಬದಲಾವಣೆ ಚಟುವಟಿಕೆ ನಡೆಯುತ್ತಿರುವುದು ನಿಜ ಎಂದು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಿಬ್ಬಂದಿಗೆ 50,000 ರೂ ಬಿಡುಗಡೆ; ಕೋವಿಡ್ ವಾರಿಯರ್ಸ್ ಎಂದು ಘೋಷಣೆ
ಈವರೆಗೆ ನಾಯಕತ್ವ ಬದಲಾವಣೆ ಸುದ್ದಿಯೇ ಸುಳ್ಳು. ಯಡಿಯೂರಪ್ಪ ರಾಜಾಹುಲಿ ಎಂಬ ಹೇಳಿಕೆ ನೀಡುತ್ತಿದ್ದ ಆರ್.ಅಶೋಕ್ ಇದೀಗ ಏಕಾಏಕಿ ನೂರಕ್ಕೆ ನೂರರಷ್ಟು ನಾಯಕತ್ವ ಬದಲಾವಣೆ ಚಟುವಟಿಕೆ ನಡೆಯುತ್ತಿದೆ ಎಂಬ ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.