ಕೊಪ್ಪಳ: ಕೊರೊನಾ ಮಾಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗದ ಕ್ಷೇತ್ರಗಳಿಲ್ಲ. ಹಲವರು ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದರೆ, ಇನ್ನು ಹಲವರಿಗೆ ಸಂಬಳವೇ ಸಿಗುತ್ತಿಲ್ಲ, ಮತ್ತೆ ಹಲವರಿಗೆ ಅರ್ಧ ಸಂಬಳದಲ್ಲೇ ಕುಟುಂಬವನ್ನು ನಿರ್ವಹಣೆ ಮಾಡಬೇಕಾದ ದುಃಸ್ಥಿತಿ. ಇನ್ನು ಸಾರಿಗೆ ಸಿಬ್ಬಂದಿಗಳ ಆರ್ಥಿಕ ಸಂಕಷ್ಟಕ್ಕಂತೂ ಕೊನೆಯಿಲ್ಲ.
ಹೌದು. ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಸಾರಿಗೆ ಸಿಬ್ಬಂದಿಯೊಬ್ಬ ಬದುಕಿನ ಬಂಡಿ ದೂಡಲು ಕಿಡ್ನಿ ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಡಿಪೋ ನಿರ್ವಾಹಕ ಹನುಮಂತಪ್ಪ, ಕುಟುಂಬ ನಿರ್ವಹಣೆಗೆ ಹಣವಿಲ್ಲದೇ ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಪ್ರಯೋಗ ಮಾಡಲು 54 ಮ್ಯಾಗ್ನೆಟಿಕ್ ಬಾಲ್ಸ್ ನುಂಗಿದ ಬಾಲಕ….!
ಕಳೆದ ಎರಡು ತಿಂಗಳಿಂದ ಸಂಬಳವಿಲ್ಲದೇ ಪರದಾಡುತ್ತಿದ್ದು, ಮನೆ ಬಾಡಿಗೆ ಕಟ್ಟಲು, ರೇಷನ್ ತರಲೂ ಕೂಡ ಹಣವಿಲ್ಲ. ಹಾಗಾಗಿ ನಾನು ನನ್ನ ಕಿಡ್ನಿ ಮಾರಾಟ ಮಾಡುತ್ತಿದ್ದೇನೆ ಎಂದು ಹೇಳಿ ಮೊಬೈಲ್ ನಂಬರ್ ಸಮೇತವಾಗಿ ಎಫ್ ಬಿಯಲ್ಲಿ ಪೋಸ್ಟ್ ಹಾಕಿದ್ದಾರೆ.