ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿ ಅನಿವಾರ್ಯವಾಗಿದೆ. ಜನರ ಜೀವ ಉಳಿಸಲು ಇಂತಹ ಕ್ರಮ ಅಗತ್ಯ ಆದರೆ ಜನರ ಜೀವದ ಜೊತೆಗೆ ಜನರ ಬದುಕಿಗೂ ನೆರವಾಗುವುದು ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಜನಹಿತದ ಲಾಕ್ ಡೌನ್ ಜಾರಿಗೆ ಸರ್ಕಾರ ಮುಂದಾಗಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಲಾಕ್ ಡೌನ್ ವಿಸ್ತರಣೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಲಾಕ್ ಡೌನ್ ನಲ್ಲಿ ಪರಿಹಾರ ಕ್ರಮಗಳು ಅಗತ್ಯ. ಕೇಂದ್ರ ಸರ್ಕಾರ ಲಾಕ್ ಡೌನ್ ಉಸಾಬರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿ ಕೈತೊಳೆದುಕೊಂಡಂತೆ ರಾಜ್ಯ ಸರ್ಕಾರ ಜನರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಅವರ ಅಗತ್ಯಗಳನ್ನು ಪೂರೈಸಬೇಕಾಗಿದ್ದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಆಹಾರ, ಆರ್ಥಿಕ ಪ್ಯಾಕೇಜ್, ಪರಿಹಾರ ಕ್ರಮಗಳು ವಿಸ್ತರಿತ ಲಾಕ್ ಡೌನ್ ನಲ್ಲಿ ಘೋಷಿಸಬೇಕು ಎಂದು ಸಲಹೆ ನೀಡಿದ್ದಾರೆ.
ರಾಜ್ಯದ 3 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್
ಈ ವರ್ಷ ಪೂರ್ತಿ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ನಿಲ್ಲಿಸಲಿ. ನಿಗಮ ಮಂಡಳಿಗಳನ್ನು ರದ್ದು ಮಾಡಲಿ. ಜನರ ರಕ್ಷಣೆಗಾಗಿ ಜನಹಿತದ ಲಾಕ್ ಡೌನ್ ಮಾಡಬೆಕು ಎಂದು ಸರ್ವಪಕ್ಷ ಸಭೆಯಲ್ಲಿ ಕೂಡ ನಾವು ಸೂಚಿಸಿದ್ದೇವೆ ಎಂದು ಹೇಳಿದರು.