ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಅಂತಿಮ ಘಟ್ಟ ತಲುಪಿದ್ದು, ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ್ ಆರಂಭವಗಿದೆ. ಇದರ ಬೆನ್ನಲ್ಲೇ ಲಿಂಗಾಯಿತ ಸಮುದಾಯದ ಸಚಿವರು, ಶಾಸಕರು ಸಭೆ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ರಾಜ್ಯದಲ್ಲಿ 80 ಲಕ್ಷ ವೀರಶೈವ ಲಿಂಗಾಯಿತರಿದ್ದಾರೆ. ಮೀಸಲಾತಿ ನೀಡುವ ಸಂಬಂಧ ಉಪಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿಯಲ್ಲಿ ನಾನೂ ಕೂಡ ಸದಸ್ಯನಾಗಿದ್ದೇನೆ. ಆಗ ಕಾನೂನು ತೊಡಕು ಬಂದ ಹಿನ್ನೆಲೆಯಲ್ಲಿ ಪಂಚಮಸಾಲಿಗೆ ಮೀಸಲಾತಿ ನೀಡಲು ಆಗಿರಲಿಲ್ಲ ಇನ್ನು ಕೆಲದಿನಗಳ ಕಾಲ ಸಮುದಾಯಗಳು ಕಾಯಬೇಕು ಎಂದರು.
ಪಂಚಮಸಾಲಿಗೆ ಮೀಸಲಾತಿಗೆ ಆಗ್ರಹ – ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಮಧ್ಯಾಹ್ನ 2ಗಂಟೆಯ ಗಡುವು
ಮೀಸಲಾತಿಗಾಗಿ 70 ವರ್ಷಗಳ ಕಾಲ ಕಾದಿದ್ದೇವೆ. ಹೀಗಿರುವಾಗ ಇನ್ನು ಸ್ವಲ್ಪ ದಿನ ತಾಳ್ಮೆಯಿಂದ ಕಾಯಬೇಕಾದ ಅಗತ್ಯವಿದೆ. ಮೀಸಲಾತಿ ನೀಡಲು ಸರ್ಕಾರಕ್ಕೆ ಸ್ವಲ್ಪ ಸಮಯ ನೀಡಬೇಕು. ಗಡುವಿನೊಳಗೆ ಮೀಸಲಾತಿ ನಿಡುವುದು ಕಷ್ಟವಾಗುತ್ತದೆ ಎಂದು ಹೆಳಿದರು.