ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಅದರಲ್ಲಿಯೂ ಸಿಬ್ಬಂದಿಗಳಲ್ಲಿ ದಿನದಿಂದ ದಿನಕ್ಕೆ ಕಂಡು ಬರುತ್ತಿರುವ ಕೋವಿಡ್ ಪಾಸಿಟಿವ್ ಕೇಸ್ ಕಂಡು ಪೊಲೀಸ್ ಇಲಾಖೆಯೇ ದಂಗಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 89 ಪೊಲೀಸರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಇಲಾಖೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಮುಂಜಾಗೃತಾ ಕ್ರಮ ಕೈಗೊಂಡರೂ ಸೋಂಕು ಹರಡುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ʼಕಷಾಯʼ
ಪಶ್ಚಿಮ ವಿಭಾಗದಲ್ಲಿಯೇ ಅತಿ ಹೆಚ್ಚು ಸಿಬ್ಬಂದಿಗಳಲ್ಲಿ ಅಂದರೆ 31 ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಪೂರ್ವ ವಿಭಾಗದಲ್ಲಿ 9, ದಕ್ಷಿಣ ವಿಭಾಗದಲ್ಲಿ 4, ಉತ್ತರ ವಿಭಾಗದಲ್ಲಿ 1, ಆಗ್ನೇಯ ವಿಭಾಗದಲ್ಲಿ 9, ವೈಟ್ ಫೀಲ್ಡ್ ನಲ್ಲಿ 1 ಕೇಂದ್ರ ವಿಭಾಗದಲ್ಲಿ 5, ಈಶಾನ್ಯ ವಿಭಾಗದಲ್ಲಿ 2, ಸಿಎಆರ್ ನ 10 ಹಾಗೂ ಸಶಸ್ತ್ರ ಮೀಸಲು ಪಡೆಯ 15 ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.