ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಆಸ್ಪತ್ರೆಗಳಲ್ಲಿ ಬೆಡ್, ಚಿಕಿತ್ಸೆ ಸಿಗದೇ ಜನರು ಸಾವನ್ನಪ್ಪುತ್ತಿದ್ದಾರೆ ಇಷ್ಟಾದರೂ ಕೊರೊನಾ ಸೋಂಕಿನಿಂದ ರಾಜ್ಯ ಬಿಜೆಪಿ ಸರ್ಕಾರ ಪಾಠ ಕಲಿತಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಕೊರೊನದಿಂದ ಕಿಂಚಿತ್ತೂ ಪಾಠ ಕಲಿಯದ ಬಿಜೆಪಿ ಸರ್ಕಾರಕ್ಕೆ ತಜ್ಞರ ಸಲಹೆಗಳು “ಗೋರ್ಕಲ್ಲ ಮೇಲೆ ಮಳೆ ಸುರಿದಂತೆ” ಅಷ್ಟೇ. ಟೆಸ್ಟಿಂಗ್‌ನಲ್ಲೂ ಫೇಲ್, ಟ್ರಾಕಿಂಗ್‌ನಲ್ಲೂ ಫೆಲ್, ಟ್ರೀಟಿಂಗ್‌ನಲ್ಲೂ ಫೆಲ್, ಬೌದ್ಧಿಕವಾಗಿ ದಿವಾಳಿಯಾದ ಸೋಂಕಿತ ಸರ್ಕಾರಕ್ಕೆ ಕೊರೊನಾ ನಿರ್ವಹಿಸುವ ಕನಿಷ್ಠ ಇಚ್ಛಾಶಕ್ತಿಯೂ ಇಲ್ಲ. ಕಾರ್ಯಸೂಚಿಯೂ ಇಲ್ಲ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.
ಕೊರೊನಾದಿಂದ ಗುಣಮುಖರಾಗಿದ್ದೀರಾ…? ಹಾಗಾದ್ರೆ ಖುಷಿ ನೀಡುತ್ತೆ ಈ ಸುದ್ದಿ
ಇದೇ ವೇಳೆ ವೈದ್ಯಕೀಯ ವ್ಯವಸ್ಥೆ ಹಾಗೂ ಸೋಂಕು ನಿಯಂತ್ರಣದ ಬಗ್ಗೆ ಕೇವಲ ಬೆಂಗಳೂರು ಕೇಂದ್ರಿತವಾಗಿ ಮಾತ್ರ ಚಿಂತಿಸದೆ ರಾಜ್ಯಾದ್ಯಂತ ಜಿಲ್ಲೆ, ತಾಲೂಕುಗಳನ್ನೂ ಗಮನದಲ್ಲಿಟ್ಟುಕೊಂಡು ಆರೋಗ್ಯ ಸಚಿವ ಸುಧಾಕರ್ ಕಾರ್ಯ ನಿರ್ವಹಿಸುವುದು ಅಗತ್ಯ. ಜಿಲ್ಲಾ ಕೇಂದ್ರಗಳಲ್ಲಿ ಕನಿಷ್ಠ ವೈದ್ಯಕೀಯ ಸೌಲಭ್ಯಗಳು ಇಲ್ಲದೆ ಜನ ಪರದಾಡುತ್ತಿದ್ದಾರೆ ಎಂದು ಸಲಹೆ ನೀಡಿದೆ.