ಬಾದಾಮಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈಗ ಯಾವ ಸೀಮೆ ಲಿಡರ್ರು? ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ 59 ಸೀಟ್ ಬಂದಿತ್ತು. ಈಗ ಅವರಿಗೆ 59 ನಂಬರ್ ರೀಚ್ ಮಾಡಲೂ ಆಗಲ್ಲ. 2006ರಲ್ಲಿ ಕುಮಾರಸ್ವಾಮಿ ಉತ್ತಮ ಆಡಳಿತ ನೀಡಿದ್ದರು. ಆಗಿನ ಕುಮಾರಸ್ವಾಮಿ ಆಡಳಿತವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಈಗ ಹೆಚ್.ಡಿ.ಕೆ. ಯಾವ ಲಿಡರ್ರು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಪ್ರಶಿಸಿದ್ದಾರೆ.
ಬಾದಾಮಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಎಂಬುದಿಲ್ಲ. ಅದು ಕೋಮುವಾದಿ ಪಕ್ಷದ ಜೊತೆ ಸೇರಿಕೊಂಡಿದೆ. ಬಿಜೆಪಿ ಜೊತೆ ಕೈ ಜೋಡಿಸಿದೆ. ಹೀಗಿರುವಾಗ ಜೆಡಿಎಸ್ ಎಲ್ಲಿದೆ ಎಂದು ಕೇಳಿದರು.
ಜೆಡಿಎಸ್ ನಾಟ್ ಎ ಪೊಲಿಟಿಕಲ್ ಪಾರ್ಟಿ; ನಾಳೆಯ ಕೇಂದ್ರ ಬಜೆಟ್ ಬಗ್ಗೆಯೂ ನಿರೀಕ್ಷೆ ಇಲ್ಲ ಎಂದ ಸಿದ್ದರಾಮಯ್ಯ
ಉಪಸಭಾಪತಿ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಪರಿಷತ್ ನಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ವೇಳೆ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದ್ದಾರೆ. ಮೊದಲು ಜೆಡಿಎಸ್ ನಲ್ಲಿ ‘S’ ಎಂಬುದನ್ನು ತೆಗೆಯಲಿ. ಜೆಡಿಎಸ್ ಜಾತ್ಯಾತೀತ ಪಕ್ಷ ಹೇಗಾಗುತ್ತದೆ? ಜೆಡಿಎಸ್ ಈಗ ಸತ್ತಿರುವ ಪಕ್ಷ ಎಂದು ವ್ಯಂಗ್ಯವಾಡಿದ್ದಾರೆ.