ಬೆಂಗಳೂರು:ಕೊರೊನಾ ಮಾಹಾಮಾರಿಗೆ ಕಡಿವಾಣ ಹಾಕಲು ಲಸಿಕೆ ಬಂದಾಯಿತು ಎಂದು ಸೋಂಕಿನ ಬಗ್ಗೆ ನಿರ್ಲಕ್ಷ ವಹಿಸುವವರು ಈ ಸುದ್ದಿ ಓದಲೇ ಬೇಕು. ಕೊರೊನಾ ಬಗ್ಗೆ ಎಷ್ಟೇ ಮುಂಜಾಗೃತೆ ವಹಿಸುವಂತೆ ಹೇಳಿದರೂ ಜನರ ಬೇಜವಾಬ್ದಾರಿ ಮಾತ್ರ ಮುಂದುವರೆಯುತ್ತಲೇ ಇದೆ. ಒಂದೇ ಕಾಲೇಜಿನ ಬರೋಬ್ಬರಿ 40 ನರ್ಸಿಂಗ್ ವಿದ್ಯಾರ್ಥಿಗಳಿಗೆ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ.
ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಮಂಜುಶ್ರೀ ನರ್ಸಿಂಗ್ ಕಾಲೇಜಿನ 40 ವಿದ್ಯಾರ್ಥಿಗಳಲ್ಲಿ ವೈರಸ್ ಪತ್ತೆಯಾಗಿದೆ.
ಒಂದೇ ದಿನ 12 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತರು ಪತ್ತೆ; 11,395 ಜನರು ಡಿಸ್ಚಾರ್ಜ್
ಸೋಂಕಿತರಲ್ಲಿ 5 ಜನ ವಿದ್ಯಾರ್ಥಿಗಳಾಗಿದ್ದು, 35 ಜನ ವಿದ್ಯಾರ್ಥಿನಿಯರಾಗಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸೋಲೇಷನ್ ನಲ್ಲಿರಿಸಲಾಗಿದೆ.