ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಟ್ವೀಟ್ ಸಮರ ಮುಂದುವರೆದಿದ್ದು, ಇದೀಗ ಸಿಡಿ ಮಹಾನಾಯಕನ ಕುರಿತಾಗಿ ಕಾಂಗ್ರೆಸ್ ಬಿಜೆಪಿ ವಿರುದ್ಧವೇ ಬೆರಳು ಮಾಡಿ ತೋರಿಸಿದೆ.
ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಕಾಮಿಡಿ ಕಿಂಗ್ ನಳೀನ್ ಕಟೀಲ್ ಅವರಿಗೆ ಯತ್ನಾಳ್ ಅವರು ಸವಾಲೆಸೆದಿದ್ದಾರೆ, ನಿಮ್ಮ ತಾಕತ್ತು ಪ್ರದರ್ಶಿಸುವ ಸಮಯವಿದು! BJP vs BJP ಕಿತ್ತಾಟದಲ್ಲಿ ಯತ್ನಾಳ್‌ರನ್ನು ಪಕ್ಷದಿಂದ ಉಚ್ಛಾಟಿಸಿ ಎಂದು ಬಿ ಎಸ್ ವೈ ಬಣ ಆಗ್ರಹಿಸಿದೆ. ಉಚ್ಛಾಟಿಸದೆ ಬಿ ಎಸ್ ವೈ ಮುಕ್ತ ಬಿಜೆಪಿ ಅಭಿಯಾನ ಮುಂದುವರೆಸುತ್ತಿರೋ ಅಥವಾ ಬಿ ಎಸ್ ವೈ ಬಿಜೆಪಿಯನ್ನು ಉಳಿಸಿಕೊಳ್ಳುತ್ತೀರೋ? ಎಂದು ಪ್ರಶ್ನಿಸಿದೆ.
ಸಿಡಿ ಪ್ರಕರಣದ ಆರೋಪಿ ಎನಿಸಿಕೊಂಡಿರುವ ಅರುಣ್ ಮೊಬೈಲ್‌ನಲ್ಲಿ ಹಲವು ಅಶ್ಲೀಲ ಚಿತ್ರಗಳಿದ್ದವು ಎಂದು ವರದಿಗಳು ಹೇಳುತ್ತಿವೆ. ತಮಗಾಗದವರ ವಿರುದ್ಧ ವಿಜಯೇಂದ್ರ ಸಿಡಿ ಫ್ಯಾಕ್ಟರಿ ಕೆಲಸ ಮಾಡುತ್ತಿದೆ, ಇನ್ನೂ 23 ಸಿಡಿಗಳಿವೆ ಎಂದು ಯತ್ನಾಳ್ ಹೇಳಿದ್ದರು. ಬಿ ಎಸ್ ವೈ ಬಿಜೆಪಿಯ ಮಹಾನಾಯಕ! ಅವರೊಂದಿಗೆ ಆರೋಪಿ ಅರುಣ್ ಆತ್ಮೀಯತೆಯ ಚಿತ್ರವಿದೆ ಎಂದಿರುವ ಕಾಂಗ್ರೆಸ್ ಅರುಣ್ ಜೊತೆ ಸಿಎಂ ಬಿ ಎಸ್ ವೈ ಇರುವ ಫೋಟೋ ಹಾಕಿ ಇವರೇನಾ ಆ “ಮಹಾನಾಯಕ”? ಎಂದು ಪ್ರಶ್ನಿಸಿದೆ.
ಸಿಡಿ ಪ್ರಕರಣದ ಬೆನ್ನಲ್ಲೇ ರಮೇಶ್ ಜಾರಕಿಹೊಳಿಗೆ ಬಿಜೆಪಿಯಿಂದ ಮತ್ತೊಂದು ಶಾಕ್
ಬಿ ಎಸ್ ವೈ ಭ್ರಷ್ಟ ಎಂದು ಮಂಚದ ಮೇಲೆ ಕನವರಿಸಿದ್ದರು ಜಾರಕಿಹೊಳಿ! ಇನ್ನೂ 23 ಸಿಡಿಗಳಿವೆ, ವಿಜಯೇಂದ್ರರದ್ದು ಸಿಡಿ ಫ್ಯಾಕ್ಟರಿ ಇದೆ ಎಂದಿದ್ದರು ಯತ್ನಾಳ್. ಬಿಜೆಪಿಯನ್ನು ಸ್ವಪಕ್ಷದವರೇ ಬ್ಲಾಕ್ಮೇಲ್ ಜನತಾ ಪಾರ್ಟಿ ಎಂದು ಹೇಳಿದ್ದರು. ಇವೆಲ್ಲವಕ್ಕೂ ಸಿಡಿ ಆರೋಪಿಯೊಂದಿಗಿನ ಈ ಚಿತ್ರ ಪುರಾವೆಯಾಗಬಲ್ಲದೇ?
ಬಿ ಎಸ್ ವೈ ಅವರೇ ರಾಜೀನಾಮೆ ನೀಡಿ ತನಿಖೆ ಎದುರಿಸುತ್ತೀರಾ? ಅಥವಾ ಕಳಂಕಿತ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಅಪವಾದ ತರುತ್ತೀರಾ? ಹಿಂದಿನ ಬಾರಿಯ ನಂಬರ್ 10462 ! ಈ ಬಾರಿ ಯಾವ ನಂಬರ್ ಸಿಗಬಹುದು ಎಂದು ನೇರವಾಗಿ ಪ್ರಶ್ನಿಸಿದೆ.