ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದೆಡೆ ಆಕ್ಸಿಜನ್, ಇನ್ನೊಂದೆಡೆ ಲಸಿಕೆಗಾಗಿ ಹಾಹಾಕಾರ ಆರಂಭವಾಗಿದೆ. ಈ ನಡುವೆ ರಾಜ್ಯ ಸರ್ಕಾರ ಮನೆ ಮನೆಗೆ ಆಕ್ಸಿಜನ್ ಪೂರೈಸುವ ವ್ಯವಸ್ಥೆ ಮಾಡಿದೆ.
ಈ ಕುರಿತು ಮಾತನಾಡಿರುವ ಡಿಸಿಎಂ ಅಶ್ವತ್ಥನಾರಾಯಣ್, ಮನೆ ಮನೆಗೂ ಆಕ್ಸಿಜನ್ ಸಾಂದ್ರಕದ ವ್ಯವಸ್ಥೆ ಮಾಡಲಾಗುತ್ತಿದೆ. ಓಲಾ ಆಪ್ ಮೂಲಕ ಆಕ್ಸಿಜನ್ ಸಾಂದ್ರಕ ತಲುಪಿಸಲಾಗುವುದು. ಆಕ್ಸಿಜನ್ ಲೆವಲ್ 90ಕ್ಕಿಂತ ಕಡಿಮೆ ಇದ್ದವರಿಗೆ ಓಲಾ ಆಪ್ ಮೂಲಕ ಡೆಪೊಸಿಟ್ ಮಾಡಿದರೆ ಆಕ್ಸಿಜನ್ ಸಾಂದ್ರಕ ಮನೆಗೆ ತಲುಪಿಸಲಾಗುತ್ತದೆ ಎಂದರು.
ʼಕೊರೊನಾʼದಿಂದ ಚೇತರಿಸಿಕೊಳ್ತಿದ್ದಂತೆ ಬದಲಾಯಿಸಿ ಈ ವಸ್ತು
ಗಿವ್ ಇಂಡಿಯಾ ಸಂಸ್ಥೆ ಸಹಯೋಗದೊಂದಿಗೆ ಈ ಯೋಜನೆ ಜಾರಿ ಮಾಡಲಾಗಿದೆ. ಮಲ್ಲೇಶ್ವರಂ ಭಾಗದಲ್ಲಿ ಈಗಾಗಲೇ 70 ಆಕ್ಸಿಜನ್ ಸಾಂದ್ರಕ ಪೂರೈಸಲಾಗಿದೆ. ಸಧ್ಯಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಈ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಇನ್ನು ಲಸಿಕೆ ಕೊರತೆ ವಿಚಾರವಾಗಿ ಮಾತನಾಡಿದ ಡಿಸಿಎಂ ರಾಜ್ಯದಲ್ಲಿ ಲಸಿಕೆ ಕೊರತೆಯಿಲ್ಲ. ಮೊದಲ ಡೋಸ್ ಹಾಗೂ ಎರಡನೇ ಡೋಸ್ ನಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಇನ್ಮುಂದೆ ಆನ್ ಲೈನ್ ನಲ್ಲಿ ನೋಂದಣಿ ಮಾಡಿದವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಮೊದಲು ನೋಂದಣಿ ಮಾಡಿದವರಿಗೆ ಮೊದಲು ಆದ್ಯತೆ ನೀಡಲಾಗುತ್ತದೆ. 45 ವರ್ಷ ಮೇಲ್ಪಟ್ಟವರು ಕೂಡ ಆನ್ ಲೈನ್ ನಲ್ಲಿಯೇ ನೋಂದಣಿ ಮಾಡಬೇಕು ಎಂದು ಹೇಳಿದರು.