ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಹೆಚ್ಚಿಸಲಾಗುತ್ತಿದ್ದು, ಇನ್ಮುಂದೆ ಸೋಂಕಿತರಿಗೆ ಸಿಸಿಸಿಗಳಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇನ್ಮುಂದೆ ಮನೆ ಮನೆಗೂ ತೆರಳಿ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಟೆಸ್ಟ್ ವರದಿ ಬರುವವರೆಗೂ ಓಡಾಟ ನಡೆಸುವಂತಿಲ್ಲ. ಸ್ಯಾಂಪಲ್ ಕೊಟ್ಟ ಮೇಲೆ ಐಸೋಲೇಟ್ ಆಗಬೇಕು. ಮನೆಗೆ ಬಂದಾಗ ಟೆಸ್ಟ್ ಬೇಡ ಎಂದು ಹೇಳುವಂತಿಲ್ಲ. ಶೀಘ್ರದಲ್ಲಿ ಮನೆ ಮನೆಗಳಲ್ಲಿ ಸಮೀಕ್ಷೆ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಕೋವಿಡ್ ಸುರಕ್ಷತಾ ಜಾಗೃತಿ ಮೂಡಿಸಲು ಮುಂಬೈ ಪೊಲೀಸರ ಫನ್ನಿ ಟ್ವೀಟ್
14 ದಿನಗಳಲ್ಲಿ ಕೇಸ್ ಕಡಿಮೆ ಮಾಡಲು ಯತ್ನಿಸಲಾಗುವುದು. ಹೋಂ ಐಸೋಲೇಷನ್ ನಲ್ಲಿರುವವರನ್ನು ಕೋವಿಡ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಲಾಗುವುದು ಹೀಗಾಗಿ ಸಿಸಿಸಿಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.