ಬೆಂಗಳೂರು: ಪಡಿತರ ಅಕ್ಕಿ ಕೇಳಿದ ವ್ಯಕಿಗೆ ಆಹಾರ ಸಚಿವ ಉಮೇಶ್ ಕತ್ತಿ ಸತ್ತು ಹೋಗುವಂತೆ ಹೇಳಿರುವುದು ಖಂಡನೀಯ. ಆಹಾರ ಸಚಿವರಾಗಿ ಇಂತಹ ದರ್ಪದ ಉತ್ತರ ನೀಡಿ ಮಾನಸಿಕ ವಿಕೃತಿ ಮೆರೆದಿರುವುದು ಅಮಾನವೀಯ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಇವರು ಮನುಷತ್ವ ಇಲ್ಲದ ಮಂತ್ರಿಗಳು, ಜನಸಾಮಾನ್ಯರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದರೆ ಮೊದಲು ಸಂಪುಟದಿಂದ ಇಂತವರನ್ನು ಒದ್ದು ಹೊರಹಾಕಲಿ. ಜನರ ಕಷ್ಟ ಕೇಳುವ ಕನಿಷ್ಠ ಸೌಜನ್ಯವೂ ಆಹಾರ ಸಚಿವರಿಗಿಲ್ಲ ಎಂದ ಮೇಲೆ ಇಂತವರು ಯಾಕೆ ಆಹಾರ ಸಚಿವರಾಗಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ ಎಣಿಕಾ ಕೇಂದ್ರಕ್ಕೆ ಹೋಗುವ ಅಭ್ಯರ್ಥಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ: ಚುನಾವಣಾ ಆಯೋಗದ ಖಡಕ್ ಸೂಚನೆ
ಜನರನ್ನು ಹೆದರಿಸಿ ಬೆದರಿ ವೋಟು ಹಾಕಿಸಿಕೊಳ್ಳುತ್ತಾರೆ. ಆದರೆ ಜನರ ಕಷ್ಟ ನಷ್ಟಗಳು ಈ ಮಂತ್ರಿಗಳಿಗೆ ಬೇಕಿಲ್ಲ. ಕನಿಷ್ಠ ಪಕ್ಷ ಸೌಜನ್ಯವಾದರೂ ಬೇಡವೇ? ಫೋನ್ ಕರೆ ಮಾಡಿದ ವ್ಯಕ್ತಿಗೆ ಹೀಗೆ ಸಾಯುವಂತೆ ಹೆಳುತ್ತಾರೆ ಎಂದರೆ ಇನ್ನು ಅವರದ್ದೇ ಕ್ಷೇತ್ರದ ಜನರನ್ನು ಹೇಗೆ ನಡೆಸಿಕೊಳ್ಳಬಹುದು? ಸಿಎಂ ಯಡಿಯೂರಪ್ಪನವರು ಮೊದಲು ಉಮೇಶ್ ಕತ್ತಿ ರಾಜೀನಾಮೆ ಪಡೆದು ಸಂಪುಟದಿಂದಲೇ ಅವರನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿದ್ದಾರೆ.