ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ 4ನೇ ಹಂತದ ಲಾಕ್ಡೌನ್ ನಾಳೆ ಅಂತ್ಯಗೊಳ್ಳಲಿದ್ದು, ಇದರ ಮಧ್ಯೆ ಮಹತ್ವದ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಕಾರಣ ಶಾಲಾ – ಕಾಲೇಜುಗಳು ಜುಲೈ 31 ರವರೆಗೆ ಬಂದ್ ಆಗಿರಲಿದ್ದು, ಜಿಮ್, ಚಿತ್ರಮಂದಿರಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ.
ಈಜುಕೊಳ, ಬಾರ್ ಅಂಡ್ ರೆಸ್ಟೋರೆಂಟ್ ಸಹ ಜುಲೈ 31 ರವರೆಗೆ ಆರಂಭಿಸಲು ಅನುಮತಿ ಇರುವುದಿಲ್ಲ.