ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಈ ಚಿಕಿತ್ಸೆಗಾಗಿ ಈಗ ದರ ನಿಗದಿ ಮಾಡಲಾಗಿದೆ.
ಜನರಲ್ ವಾರ್ಡ್ ಗೆ ದಿನದ ಚಿಕಿತ್ಸಾ ವೆಚ್ಚ 5,200 ರೂ. ನಿಗದಿ ಮಾಡಲಾಗಿದ್ದು, ಐಸೋಲೇಶನ್ ವಾರ್ಡ್ ಗೆ ಪ್ರತಿ ದಿನಕ್ಕೆ 8,500 ರೂಪಾಯಿ ನಿಗದಿಪಡಿಸಲಾಗಿದೆ. ಹಾಗೇ ಐಸಿಯು ವಿತ್ ವೆಂಟಿಲೇಟರ್ ಗೆ 12,000 ರೂ. ನಿಗದಿಪಡಿಸಲಾಗಿದೆ.
ಗಂಟಲು ದ್ರವ ಪರೀಕ್ಷೆಗೆ 2,600 ರೂಪಾಯಿ ನಿಗದಿಪಡಿಸಲಾಗಿದ್ದು, ಜನರಲ್ ವಾರ್ಡ್ ವಿತ್ ಆಕ್ಸಿಜನ್ ಗೆ 7,500 ರೂಪಾಯಿ ನಿಗದಿಪಡಿಸಲಾಗಿದೆ.
ಈ ದರಕ್ಕೆ ಖಾಸಗಿ ಆಸ್ಪತ್ರೆಗಳವರೂ ಸಹ ಒಪ್ಪಿಕೊಂಡಿದ್ದಾರೆನ್ನಲಾಗಿದ್ದು, ಇಂದು ಅಥವಾ ನಾಳೆಯೊಳಗಾಗಿ ಈ ಕುರಿತ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆಯಿದೆ.