
ಬೀದರ್ ಜಿಲ್ಲೆಯಲ್ಲಿ 10 ಜನರಿಗೆ ಕೊರೊನಾ ಸೋಂಕು ತಗಲಿದ್ದು ಸೋಂಕಿತರ ಸಂಖ್ಯೆ 411 ಕ್ಕೆ ಏರಿಕೆಯಾಗಿದೆ. ಬಸವಕಲ್ಯಾಣ, ಚಿಟಗುಪ್ಪ, ಔರಾದ್ ತಾಲೂಕಿನವರಿಗೆ ಸೋಂಕು ತಗಲಿದೆ. ಮಹಾರಾಷ್ಟ್ರ ಬಂದಿದ್ದ 10 ಮಂದಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ
ಬೀದರ್ ಜಿಲ್ಲೆಯಲ್ಲಿ ಕೊರೋನಾಗೆ ಇಬ್ಬರು ಮೃತಪಟ್ಟಿದ್ದಾರೆ. ಜೂನ್ 11 ರಂದು ಬಸವಕಲ್ಯಾಣದ 70 ವರ್ಷದ ವೃದ್ಧ ಮೃತಪಟ್ಟಿದ್ದು, ವೈದ್ಯಕೀಯ ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮಾನವಾಡಿಯ 45 ವರ್ಷದ ವ್ಯಕ್ತಿ ನಿನ್ನೆ ಸಾವನ್ನಪ್ಪಿದ್ದು ಇಂದು ಕೊರೋನಾ ಸೋಂಕು ತಗುಲಿರುವ ವರದಿ ಬಂದಿದೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಕೊರೋನಾಗೆ 11 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.