
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರಸಣಗಿ ಬಳಿ ಭೀಮಾನದಿಯಲ್ಲಿ ನೀರುಪಾಲಾಗಿದ್ದ ನಾಲ್ವರ ಮೃತದೇಹ ಪತ್ತೆಯಾಗಿದೆ.
ಯಾದಗಿರಿ ನಗರದ ಅಜಿತ್ ಕಾಲೋನಿ ನಿವಾಸಿಗಳಾದ ಅಮಾನ್, ಅಯಾನ್, ಇರ್ಫಾನ್, ರೆಹಾನ್ ಅವರ ಮೃತದೇಹಗಳು ಇವತ್ತು ಬೆಳಗ್ಗೆ ಸಿಕ್ಕಿವೆ. ನಿನ್ನೆ ಮಧ್ಯಾಹ್ನ ಭೀಮಾನದಿಯಲ್ಲಿ ಈಜಲು ತೆರಳಿದ್ದ ವೇಳೆ ನಾಲ್ವರು ನೀರು ಪಾಲಾಗಿದ್ದರು.
ಅಗ್ನಿಶಾಮಕದಳದ ಸಿಬ್ಬಂದಿ, ಪೊಲೀಸರು ಸ್ಥಳೀಯರ ನೆರವಿನೊಂದಿಗೆ ನಿನ್ನೆಯಿಂದಲೂ ಹುಡುಕಾಟ ನಡೆಸಿದ್ದು ಇವತ್ತು ಬೆಳಿಗ್ಗೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ ಎನ್ನಲಾಗಿದೆ.