ಕರ್ನಾಟಕ ಚಿತ್ರಕಲಾ ಪರಿಷತ್ತು ಕಲಾ ರಸಿಕರನ್ನು ರಂಜಿಸಲು ಸರಣಿ ಕಾರ್ಯಕ್ರಮಗಳನ್ನ ಆಯೋಜಿಸಿದೆ. ಜನವರಿ ತಿಂಗಳ ವಾರದ ಕೊನೆಯ ದಿನಗಳಂದು ಹುಲಿವೇಷ ನೃತ್ಯ, ಡೊಳ್ಳು ಕುಣಿತ, ತೊಗಲು ಗೊಂಬೆಯಾಟ ಪ್ರದರ್ಶಿಸಲಿದೆ.
ಜನವರಿ 3 ರ ಭಾನುವಾರ ಕರಾವಳಿ ಭಾಗದ ಪ್ರಸಿದ್ಧ ಕಲಾ ಪ್ರಾಕಾರವಾದ ಹುಲಿ ವೇಷ ನೃತ್ಯ ಪ್ರದರ್ಶನ ನಡೆಯಲಿದೆ.
ಜನವರಿ 10 ರ ಭಾನುವಾರದಂದು ಡೊಳ್ಳು ಕುಣಿತ ಮತ್ತು ಜನವರಿ 17 ರ ಭಾನುವಾರದಂದು ತೊಗಲು ಗೊಂಬೆಯಾಟ ನಡೆಯಲಿದೆ.
ಪರಿಷತ್ತಿನ ಆವರಣದಲ್ಲಿ ಚಿತ್ರಕಲಾ ಕಾಲೇಜು ಇದ್ದು, 15 ಗ್ಯಾಲರಿಗಳಿವೆ. ಈ ಪೈಕಿ 13 ಗ್ಯಾಲರಿಗಳಲ್ಲಿ ಸದಾಕಾಲ ವರ್ಣಚಿತ್ರಗಳು, ಶಿಲ್ಪಕಲೆ, ಜನಪದ ಕಲಾ ಪ್ರದರ್ಶನಗಳು ಇದ್ದೇ ಇರುತ್ತವೆ.