ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು ಹೊಸಕೆರೆಹಳ್ಳಿಯಲ್ಲಿ 200 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಲುವೆಯ ನೀರು ಓವರ್ ಫ್ಲೋ ಆಗಿ ಮನೆಗಳಿಗೆ ನುಗ್ಗಿದೆ. ಇಡೀ ರಾತ್ರಿ ಮಳೆ ನೀರಿನಲ್ಲಿ ಜನ ಜೀವನ ಕಳೆದಿದ್ದಾರೆ. ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ನೀರುಪಾಲಾಗಿದೆ.
ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಭಾಗದಲ್ಲಿ ಅವಾಂತರ ಸೃಷ್ಟಿಸಿದ್ದ ಮಳೆ ರಾಜಧಾನಿಯಲ್ಲಿ ನಡುಕ ಹುಟ್ಟಿಸಿದೆ. ಕಾರ್, ಬೈಕುಗಳು ಭಾರಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಬೋಟ್ ಗಳನ್ನು ಬಳಸಿ ಜನರನ್ನು ರಕ್ಷಿಸಲಾಗಿದೆ. ಹೊಸಕೆರೆಹಳ್ಳಿಯ ಕಾಲುವೆಯಲ್ಲಿ ಪ್ರವಾಹ ಉಂಟಾಗಿದೆ. ಆರ್.ಆರ್. ನಗರ ಹಲವು ಪ್ರದೇಶ, ದಕ್ಷಿಣ ಬೆಂಗಳೂರು ಭಾಗದ ಹಲವೆಡೆ ರಸ್ತೆ, ತಗ್ಗು ಪ್ರದೇಶ ಜಲಾವೃತಗೊಂಡಿದ್ದು ಗವಿಗಂಗಾಧರೇಶ್ವರ ಗೋಡೆ ಕುಸಿದಿದೆ, ಬೈಕ್ ಗಳು ಮಳೆ ನೀರಿನಲ್ಲಿ ಮುಳುಗಿವೆ. ಬರೋಬ್ಬರಿ 10 ಸೆಂಟಿಮೀಟರ್ ಗೂ ಅಧಿಕ ಮಳೆಯಾಗಿದೆ. ಇನ್ನು ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಬೆಂಗಳೂರು ಜನ ಹೈರಾಣಾಗಿದ್ದಾರೆ.