ಬೆಂಗಳೂರು: ವಿದ್ಯುತ್ ಪ್ರವಹಿಸಿ ಬಾಲಕಿ ಮೃತಪಟ್ಟ ಘಟನೆ ಬೆಂಗಳೂರು ಆರ್.ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾವಲ್ ಭೈರಸಂದ್ರದಲ್ಲಿ ನಡೆದಿದೆ.
ಮಳೆ ಬರುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಕಂಬ ಸ್ಪರ್ಶಿಸಿದಾಗ ದುರಂತ ಉಂಟಾಗಿದೆ. 8 ವರ್ಷದ ಫಾತಿಮಾ ಮೃತಪಟ್ಟ ಬಾಲಕಿ ಎಂದು ಹೇಳಲಾಗಿದೆ. ನಿನ್ನೆ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಬಾಲಕಿ ವಿದ್ಯುತ್ ಕಂಬ ಮುಟ್ಟಿದ್ದರಿಂದ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.