alex Certify ಎದುರು ಮನೆ ವಾಸಿ ಎಂದು ಗೃಹ ಪ್ರವೇಶಕ್ಕೆ ಕರೆಯಲು ಬಂದವ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದುರು ಮನೆ ವಾಸಿ ಎಂದು ಗೃಹ ಪ್ರವೇಶಕ್ಕೆ ಕರೆಯಲು ಬಂದವ ಮಾಡಿದ್ದೇನು ಗೊತ್ತಾ…?

ಬೆಂಗಳೂರು: ಗೃಹಪ್ರವೇಶಕ್ಕೆ ಕರೆಯುವ ನೆಪದಲ್ಲಿ ವೃದ್ಧ ದಂಪತಿಗೆ ವಂಚಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. 24 ಗ್ರಾಂ ಚಿನ್ನದ ಸರವನ್ನು ದೋಚಿದ್ದ ಅಕ್ಷಯ್ ಎಂಬುವನನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ರಾಜಾಜಿನಗರದಲ್ಲಿರುವ ದಂಪತಿಗೆ ಆರೋಪಿ ವಂಚಿಸಿದ್ದ. ಅಕ್ಟೋಬರ್ 1 ರಂದು ಸೀತಾಪತಿ ಮನೆಗೆ ಹೋಗಿದ್ದ ಅಕ್ಷಯ್ ನಾನು ನಿಮ್ಮ ಮನೆಯ ಎದುರುಗಡೆ ನಿವಾಸಿ ಎಂದು ತಿಳಿಸಿದ್ದಾನೆ. ನಮ್ಮ ಮನೆಯ ಗೃಹಪ್ರವೇಶವಿದೆ ಎಂದು ಆಹ್ವಾನ ನೀಡಿದ್ದಾನೆ. ಇದೇ ವೇಳೆ ವೃದ್ಧ ದಂಪತಿಗೆ ಬೆಳ್ಳಿ ಮಾದರಿಯ ಕಾಯಿನ್ ಕೊಟ್ಟ ಆರೋಪಿ ಚಿನ್ನದ ಸರಕ್ಕೆ ಚಿನ್ನದ ಡಾಲರ್ ನೀಡುವುದಾಗಿ ಹೇಳಿದ್ದಾನೆ.

ಏನೇನೋ ಹೇಳಿ ವೃದ್ಧ ದಂಪತಿಯಿಂದ 24 ಗ್ರಾಂ ಚಿನ್ನದ ಸರ ಪಡೆದುಕೊಂಡಿದ್ದಾನೆ. ಇದೇ ವೇಳೆ ಗ್ಯಾಸ್ ಸಿಲಿಂಡರ್ ವ್ಯಕ್ತಿ ಮನೆಗೆ ಬಂದಿದ್ದು, ಆತನಿಗೆ ಹಣ ಕೊಡಲು ದಂಪತಿಗೆ ಹೊರಗೆ ಹೋಗುತ್ತಿದ್ದಂತೆ ಪರಾರಿಯಾಗಿದ್ದಾನೆ. ಸಿಸಿ ಟಿವಿ ಆಧರಿಸಿ ಪರಿಶೀಲನೆ ನಡೆಸಿದ ಪೊಲೀಸರು ಡಿಯೋ ದ್ವಿಚಕ್ರವಾಹನದ ನಂಬರ್ ಆಧರಿಸಿ ಆರೋಪಿ ಅಕ್ಷಯ್ ನನ್ನು ಬಂಧಿಸಿ ಸರ ಜಪ್ತಿ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...