ಬೆಂಗಳೂರು: ಸಾರ್ವಜನಿಕರು ರೈಲು ನಿಲ್ದಾಣಕ್ಕೆ ಪ್ರವೇಶಿಸಲು ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗುತ್ತಿದೆ. ಸೆಪ್ಟಂಬರ್ 12 ರಿಂದ ನಿರ್ಬಂಧ ತೆರವುಗೊಳಿಸಲಿದ್ದು, 10 ರೂಪಾಯಿ ಇದ್ದ ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನು ಬರೋಬ್ಬರಿ 50 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ ಮತ್ತು ಬೆಂಗಳೂರು ದಂಡು ರೈಲು ನಿಲ್ದಾಣಗಳಿಗೆ ಪ್ರವೇಶಿಸುವವರು 50 ರೂ. ಪ್ಲಾಟ್ ಫಾರ್ಮ್ ಟಿಕೆಟ್ ಪಡೆದುಕೊಳ್ಳಬೇಕಿದೆ.
ಬೇರೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಹೊರತಾಗಿ ಬೇರೆಯವರಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ನೈರುತ್ಯ ರೈಲ್ವೇ ಬೆಂಗಳೂರು ವಿಭಾಗ ಮಾಹಿತಿ ನೀಡಿದೆ.