
ಬೆಂಗಳೂರು: ಅಕ್ಕನ ಜೊತೆ ಜಗಳ ಮಾಡಿದ್ದಕ್ಕೆ ಬಾಮೈದನೇ ಬಾವನನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ನಂದಿನಿಲೇಔಟ್ ಬಡಾವಣೆಯಲ್ಲಿ ನಡೆದಿದೆ.
ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಂಠೀರವ ನಗರ ರಸ್ತೆಯ ಮನೆಯಲ್ಲಿ ಅಜೀಮ್ ವುಲ್ಲಾ ಎಂಬುವರನ್ನು ಕೊಲೆ ಮಾಡಲಾಗಿದೆ. ಬಾವನನ್ನು ಹತ್ಯೆ ಮಾಡಿದ ಬಾಮೈದ ಖಾದರ್ ಪರಾರಿಯಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.