alex Certify ಟ್ರಾಫಿಕ್ ​ನಿಯಮ ಉಲ್ಲಂಘಿಸಿದ ಸವಾರನಿಗೆ 2 ಮೀಟರ್​ ಉದ್ದದ ಚಲನ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಫಿಕ್ ​ನಿಯಮ ಉಲ್ಲಂಘಿಸಿದ ಸವಾರನಿಗೆ 2 ಮೀಟರ್​ ಉದ್ದದ ಚಲನ್​..!

ಹಲವು ಬಾರಿ ಟ್ರಾಫಿಕ್​ ಉಲ್ಲಂಘನೆ ಮಾಡಿದ ಬೈಕ್​ ಸವಾರನಿಗೆ ಸಂಚಾರಿ ಠಾಣೆ ಪೊಲೀಸರು ಬರೋಬ್ಬರಿ 2 ಮೀಟರ್​ ಉದ್ದದ ಚಲನ್​ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅನೇಕ ಬಾರಿ ಸಂಚಾರಿ ಉಲ್ಲಂಘನೆ ಮಾಡಿದ ಈ ಮಹಾಶಯನಿಗೆ 42,500 ರೂಪಾಯಿ ದಂಡ ವಿಧಿಸಲಾಗಿದೆ.

ಮಡಿವಾಳ ನಿವಾಸಿಯಾಗಿದ್ದ ಅರುಣ್​ ಕುಮಾರ್​ ಎಂಬವರ ಮೇಲೆ ಬರೋಬ್ಬರಿ 77 ಸಂಚಾರಿ ನಿಯಮ ಉಲ್ಲಂಘನೆ ಕೇಸ್​ಗಳು ದಾಖಲಾಗಿದ್ದವು. ರಸ್ತೆಯಲ್ಲಿ ನಿಂತಿದ್ದ ಪೊಲೀಸರು ಅಕಸ್ಮಾತ್ತಾಗಿ ಅರುಣ್​ ಕುಮಾರ್​ನನ್ನ ಹಿಡಿದಿದ್ದಾರೆ. ಟ್ರಾಫಿಕ್​ ಉಲ್ಲಂಘನೆ ಚಲನ್​ ನೀಡಲು ಹೋದ ಪೊಲೀಸರು ಈ 2 ಮೀಟರ್​ ಉದ್ದದ ಲಿಸ್ಟ್ ಕಂಡು ಶಾಕ್​ ಆಗಿದ್ದಾರೆ.

20,000 ರೂಪಾಯಿ ನೀಡಿ ಅರುಣ್​ ಕುಮಾರ್​ ಇದನ್ನು ಸೆಕೆಂಡ್​ ಹ್ಯಾಂಡ್​ಗೆ ಖರೀದಿ ಮಾಡಿದ್ದರು ಎನ್ನಲಾಗಿದ್ದು ವಾಹನವ​ನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...