alex Certify 1 ವಾರ ಲಾಕ್ಡೌನ್: ಇಂದು ರಾತ್ರಿಯಿಂದಲೇ ಜಾರಿ: ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ವಾರ ಲಾಕ್ಡೌನ್: ಇಂದು ರಾತ್ರಿಯಿಂದಲೇ ಜಾರಿ: ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ 8 ಗಂಟೆಯಿಂದ ಒಂದು ವಾರ ಲಾಕ್ ಡೌನ್ ಜಾರಿ ಮಾಡಿ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿದೆ.

ಈಗಾಗಲೇ ಬಂದ್ ಆಗಿರುವ ಶಾಲಾ-ಕಾಲೇಜುಗಳು ಕೋಚಿಂಗ್ ಸೆಂಟರ್ ಇರುವುದಿಲ್ಲ. ಸಿನಿಮಾ ಮಂದಿರ, ಮಾಲ್, ಶಾಪಿಂಗ್ ಸೆಂಟರ್ ಬಂದ್ ಆಗಲಿವೆ. ಲಾಕ್ಡೌನ್ ವೇಳೆ ಬಾರ್ ಗಳನ್ನು ತೆರೆಯುವಂತಿಲ್ಲ. ಮನರಂಜನಾ ಕೇಂದ್ರ, ಉದ್ಯಾನವನ, ಸಭಾಭವನಗಳು ಬಂದ್ ಆಗಲಿವೆ.

ದೇವಾಲಯ, ಚರ್ಚ್, ಮಸೀದಿ ಬಂದ್ ಮಾಡಲಾಗುವುದು. ಹೋಟೆಲ್ ಗಳಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದೆ. ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಮೊಟ್ಟೆ, ಮೀನು, ಮಾಂಸ ಮಾರಾಟಕ್ಕೆ ನಿಷೇಧ ಇಲ್ಲ. ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ಇರುವುದಿಲ್ಲ. ಮೆಟ್ರೋ ರೈಲು ಸಂಚಾರಕ್ಕೆ ನಿರ್ಬಂಧ ಮುಂದುವರಿಯಲಿದೆ.

ಸ್ಥಳೀಯ ಮಳಿಗೆಗಳು, ಬೃಹತ್ ಇಟ್ಟಿಗೆ ಮತ್ತು ಗಾರೆ ಅಂಗಡಿಗಳು ಅಥವಾ ಇ-ಕಾಮರ್ಸ್ ಕಂಪನಿಗಳ ಮೂಲಕ ಅತ್ಯವಶ್ಯಕ ವಸ್ತುಗಳ ಉತ್ಪಾದನೆ ಅಥವಾ ಚಿಲ್ಲರೆ ಮಾರಾಟ ಯಾವುದೇ ಆಗಿರಲಿ ವಸ್ತುಗಳ ಪೂರೈಕೆ ಎಲ್ಲ ಸೌಲಭ್ಯಗಳನ್ನು ಮತ್ತು ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ಕೋವಿಡ್ -19 ನಿರ್ದೇಶನಗಳನ್ನು ಪಾಲಿಸುವುದಕ್ಕೆ ಒಳಪಟ್ಟು ಸರಬರಾಜು ಮಾಡಲು ಅವಕಾಶ ನೀಡಲಾಗಿದೆ.

ಬೆಂಗಳೂರು ಪ್ರದೇಶದ ವ್ಯಾಪ್ತಿಯ ಒಳಗೆ ಹೊರಗಿನಿಂದ ಕಾರ್ಮಿಕರನ್ನು ಕರೆ ತರದೆ ಸ್ಥಳೀಯವಾಗಿಯೇ ಇರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಯೋಜನೆಗಳ ಕಾಮಗಾರಿ ಮುಂದುವರಿಸಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...