ಬೆಂಗಳೂರು: ಕೊರೋನಾ ತಡೆ ಉದ್ದೇಶದಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಳೆಯಿಂದ ಒಂದು ವಾರ ಲಾಕ್ ಡೌನ್ ಜಾರಿ ಮಾಡಿರುವ ಸರ್ಕಾರದಿಂದ ಲಾಕ್ಡೌನ್ ಮಾರ್ಗಸೂಚಿ ಹೊರಡಿಸಲಾಗಿದೆ.
ಈಗಾಗಲೇ ಬಂದ್ ಆಗಿರುವ ಶಾಲಾ-ಕಾಲೇಜುಗಳು, ಕೋಚಿಂಗ್ ಸೆಂಟರ್ ಇರುವುದಿಲ್ಲ. ಸಿನಿಮಾ ಮಂದಿರ, ಮಾಲ್, ಶಾಪಿಂಗ್ ಸೆಂಟರ್ ಬಂದ್ ಆಗಲಿವೆ. ಲಾಕ್ಡೌನ್ ವೇಳೆ ಬಾರ್ ಗಳನ್ನು ತೆರೆಯುವಂತಿಲ್ಲ. ಮನರಂಜನಾ ಕೇಂದ್ರ, ಉದ್ಯಾನವನ, ಸಭಾಭವನಗಳು ಬಂದ್ ಆಗಲಿವೆ.
ದೇವಾಲಯ, ಚರ್ಚ್, ಮಸೀದಿ ಬಂದ್ ಮಾಡಲಾಗುವುದು. ಹೋಟೆಲ್ ಗಳಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದೆ. ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಮೊಟ್ಟೆ, ಮೀನು, ಮಾಂಸ ಮಾರಾಟಕ್ಕೆ ನಿಷೇಧ ಇಲ್ಲ. ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ಇರುವುದಿಲ್ಲ. ಮೆಟ್ರೋ ರೈಲು ಸಂಚಾರಕ್ಕೆ ನಿರ್ಬಂಧ ಮುಂದುವರಿಯಲಿದೆ.
ಜುಲೈ 14 ರಂದು ರಾತ್ರಿ 8 ಗಂಟೆಯಿಂದ ಜುಲೈ 22 ರಂದು ಬೆಳಗ್ಗೆ 5 ಗಂಟೆಯವರೆಗೆ 7 ದಿನಗಳ ಲಾಕ್ ಡೌನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.