![](https://kannadadunia.com/wp-content/uploads/2019/07/1533280432-video-300x225.jpg)
ಬೆಂಗಳೂರು: ವರದಕ್ಷಿಣೆ ತರದಿದ್ದರೆ ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಶಿವಾಜಿ ನಗರ ಮಹಿಳಾ ಠಾಣೆಗೆ ದೂರು ನೀಡಲಾಗಿದೆ.
ಪಾದರಾಯನಪುರ ನಿವಾಸಿಯಾಗಿರುವ 26 ವರ್ಷದ ಮಹಿಳೆ ಥಣಿಸಂದ್ರದ ನಿವಾಸಿ ತನ್ವೀರ್ ಅಹಮದ್ ಎಂಬುವನ ವಿರುದ್ಧ ದೂರು ನೀಡಿದ್ದಾರೆ. ಗಂಡ, ಆತನ ತಂದೆ-ತಾಯಿ ಸೇರಿ ಆರು ಮಂದಿ ವಿರುದ್ಧ ದೂರು ದಾಖಲಾಗಿದೆ.
2017 ರಲ್ಲಿ ಮದುವೆಯಾಗಿದ್ದು 4 ಲಕ್ಷ ರೂಪಾಯಿ ವರದಕ್ಷಿಣೆ ನೀಡಲಾಗಿತ್ತು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ಗಂಡನ ಮನೆಯವರು ಹೆಣ್ಣು ಮಗು ಜನಿಸಿದ ಬಳಿಕ ವರ್ತನೆ ಬದಲಿಸಿದ್ದರು. ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಮಹಿಳೆಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ವರದಕ್ಷಿಣೆ ತರದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಪತಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ನೊಂದ ಮಹಿಳೆ ಗಂಡ ಮತ್ತಾತನ ಮನೆಯವರ ವಿರುದ್ಧ ದೂರು ನೀಡಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.