ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗಗೊಂಡಿದೆ. ನಗರದ ಅರ್ಧದಷ್ಟು ಜನಸಂಖ್ಯೆ ಕೊರೊನಾ ಸಕಾರಾತ್ಮಕ ಜನರ ಅಥವಾ ಅವರ ಸಂಪರ್ಕಕ್ಕೆ ಬಂದ ಜನರ ಸಂಪರ್ಕದಲ್ಲಿದೆ ಎಂದು ಬಿಬಿಎಂಪಿ ಹೇಳಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಇದು ನಗರದ ಜನಸಂಖ್ಯೆಯ ಶೇಕಡಾ 45 ರಷ್ಟಿದೆ. 48.5 ಲಕ್ಷ ಸಂಪರ್ಕಗಳಲ್ಲಿ 23.2 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಮತ್ತು 25.3 ಲಕ್ಷಕ್ಕೂ ಹೆಚ್ಚು ದ್ವಿತೀಯ ಸಂಪರ್ಕಗಳಿವೆ. ಆದ್ರೆ ಕೊರೊನಾ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವೆಂದು ಬಿಬಿಎಂಪಿ ಆಯುಕ್ತ ಗೌತಮ್ ಗುಪ್ತಾ ಹೇಳಿದ್ದಾರೆ.
ಕೊರೊನಾ ರೋಗಿಗಳ ಸಂಪರ್ಕಕ್ಕೆ ಬರುವ ಕುಟುಂಬಸ್ಥರನ್ನು ಪ್ರಾಥಮಿಕ ಸಂಪರ್ಕದಲ್ಲಿರುವವರೆಂದು ಪರೀಕ್ಷೆ ಮಾಡಲಾಗ್ತಿದೆ. ಎರಡನೇ ಸಂಪರ್ಕದವರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಕೊರೊನಾ ವೈರಸ್ ಮಾರಕ ಅಲೆ ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ಆಯುಕ್ತರು, ಮನೆಯಿಂದ ಹೊರಗೆ ಬರದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.