ಬೆಂಗಳೂರು: ವೇಶ್ಯಾವಾಟಿಕೆ ಹೆಸರಲ್ಲಿ ಟೆಕ್ಕಿಗೆ ವಂಚಿಸಿದ ಘಟನೆ ನಡೆದಿದೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿರುವ ಯುವಕ ತನ್ನ ಕಂಪನಿಯಲ್ಲಿ ಅನೇಕರನ್ನು ಕೆಲಸದಿಂದ ವಜಾ ಮಾಡಿದ್ದರಿಂದ ತನ್ನ ಕೆಲಸವೂ ಹೋಗುತ್ತದೆ ಎಂದು ಆನ್ಲೈನ್ ನಲ್ಲಿ ಕೆಲಸ ಹುಡುಕಾಟ ಆರಂಭಿಸಿದ್ದಾನೆ.
ಈ ವೇಳೆ ವೆಬ್ಸೈಟ್ ಒಂದಕ್ಕೆ ಲಾಗಿನ್ ಆಗಿದ್ದು ಅದರಲ್ಲಿ ಮೊಬೈಲ್ ನಂಬರ್ ಗಳಿಗೆ ಕರೆಮಾಡಿ ಕೆಲಸದ ಬಗ್ಗೆ ಮಾಹಿತಿ ಕೇಳಿದ್ದಾನೆ. ಅಪರಿಚಿತ ವ್ಯಕ್ತಿ ವೇಶ್ಯಾವಾಟಿಕೆಗೆ ಆಫರ್ ಮಾಡಿದ್ದಾನೆ. ಮಹಿಳೆಯರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಕೆಲಸವಿದ್ದು, ಅದಕ್ಕಾಗಿ ವೇತನ ನೀಡಲಾಗುವುದು ಎಂದು ತಿಳಿಸಿದ್ದಾರೆ.
1000 ರೂಪಾಯಿ ಪಾವತಿಸಿದ್ದು, ಹಂತಹಂತವಾಗಿ 83,500 ರೂ. ಪಡೆದುಕೊಂಡ ವಂಚಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದ್ದು, ಟೆಕ್ಕಿ ಪೊಲೀಸರ ಮೊರೆ ಹೋಗಿದ್ದಾನೆ ಎಂದು ಹೇಳಲಾಗಿದೆ.