ಕೊರೊನಾ ಸೋಂಕಿತರಲ್ಲಿ ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆ ನೀಡುವ ವೈದ್ಯರೂ ಗೊಂದಲಕ್ಕೀಡಾಗಿದ್ದಾರೆ.
ಬೆಂಗಳೂರಿನ ಏಸ್ತರ್ ಸಿಎಂಐ ಆಸ್ಪತ್ರೆಗೆ ಸೇರಿದ್ದ ಮಗುವಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆ ನೀಡಿ ಗುಣಮುಖವಾದ 45 ದಿನದ ಬಳಿಕ ಬಹುಅಂಗಾಂಗ ಉರಿಯೂತ ಲಕ್ಷಣ (ಮಲ್ಟಿ ಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್) ಕಾಣಿಸಿಕೊಂಡಿದೆ.
ಇನ್ನೊಂದು ಪ್ರಕರಣದಲ್ಲಿ ಹೊಟ್ಟೆ ನೋವು, ವಿಷಮ ಜ್ವರ, ಉರಿಯೂತ, ಎದೆನೋವು ಕಾಣಿಸಿಕೊಂಡ 12 ವರ್ಷದ ಮಗುವನ್ನು ಯಶವಂತಪುರ ಬಳಿಯ ಕೊಲಂಬಿಯಾ ಏಶಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೊರೊನಾಕ್ಕೆ ಸಂಬಂಧಿಸಿದ ಲಕ್ಷಣಗಳಿರಲಿಲ್ಲ. ಆದರೂ ಪರೀಕ್ಷೆ ಮಾಡಿದಾಗ ಸೋಂಕು ದೃಢಪಟ್ಟಿತ್ತು. ಅಂದರೆ, ನಿಗದಿತ ಲಕ್ಷಣಗಳಿಗಿಂತ ಭಿನ್ನ ಲಕ್ಷಣಗಳು ತೋರುತ್ತಿರುವುದು ಅಪಾಯಕಾರಿ ಎನ್ನುತ್ತಾರೆ ವೈದ್ಯರು.