
ಬೆಂಗಳೂರು: ಪತಿ ಸಾವಿನ ಸುದ್ದಿ ತಿಳಿದ ಪತ್ನಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೆಸಿ ನಗರದ ಕುರುಬರಹಳ್ಳಿ ನಿವಾಸಿ ಚಂದ್ರಶೇಖರ(75) ಹಾಗೂ ಸುಶೀಲಮ್ಮ(65) ಮೃತಪಟ್ಟ ದಂಪತಿ ಎಂದು ಹೇಳಲಾಗಿದೆ. ಪುತ್ರಿ ನಿವಾಸದಲ್ಲಿ ದಂಪತಿ ವಾಸವಾಗಿದ್ದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರಶೇಖರ್ ಶನಿವಾರ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ. ಪತಿ ಸಾವಿನಿಂದ ತೀವ್ರ ದುಃಖಿತರಾದ ಸುಶೀಲಮ್ಮ ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಇಬ್ಬರಿಗೂ ಕೊರೊನಾ ಸೋಂಕು ಇರಲಿಲ್ಲ ಎಂದು ಹೇಳಲಾಗಿದೆ.