
ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆ ನಡೆಸಿದ ಪಾದರಾಯನಪುರ ಕಾರ್ಪೊರೇಟರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಇಮ್ರಾನ್ ಪಾಶಾ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ ಬೆಂಬಲಿಗರು ಸಂಭ್ರಮಾಚರಣೆಯೊಂದಿಗೆ ಮೆರವಣಿಗೆ ಮಾಡಿದ್ದಾರೆ.
ನಿಯಮ ಉಲ್ಲಂಘಿಸಿ ಇಮ್ರಾನ್ ಪಾಶಾ ಮೆರವಣಿಗೆ ನಡೆಸಿರುವುದು ಅಪರಾಧವಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ. ಇಮ್ರಾನ್ ಪಾಷಾ ಮೆರವಣಿಗೆ ಮಾಡಿರುವುದು ಶುದ್ಧ ತಪ್ಪು ಎಂದು ಹೇಳಿದ್ದು, ಮೆರವಣಿಗೆಗೆ ತಡೆ ನೀಡಿದ ಪೊಲೀಸರು ಇಮ್ರಾನ್ ಪಾಶಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.