ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡ ಕೊರೋನಾ ಸ್ಪೋಟವಾಗಿದ್ದು, ಬರೋಬ್ಬರಿ 889 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6179 ಕ್ಕೆ ಏರಿಕೆಯಾಗಿದೆ.
ಇಂದು 30 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ 573 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 5505 ಸಕ್ರಿಯ ಪ್ರಕರಣಗಳಿದ್ದು, ಇಷ್ಟೊಂದು ದೊಡ್ಡ ಸಂಖ್ಯೆಯ ಸೋಂಕಿತರಿಗೆ ಬೆಡ್ ವ್ಯವಸ್ಥೆ ಮಾಡುವುದು, ಇವರೊಂದಿಗೆ ವೈದ್ಯರು, ಸಿಬ್ಬಂದಿಗೆ ಕೂಡ ವ್ಯವಸ್ಥೆ ಕಲ್ಪಿಸಬೇಕಿರುವುದು ಕಷ್ಟ ಸಾಧ್ಯವೆನ್ನಲಾಗಿದೆ. ಇನ್ನು ಬೆಂಗಳೂರಿನಲ್ಲಿ ಕೊರೋನಾದಿಂದ ಇದುವರೆಗೆ 100 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಸತತ 6 ನೇ ದಿನವೂ 500 ಕ್ಕಿಂತ ಹೆಚ್ಚಿನ ಹೊಸ ಪ್ರಕರಣ ದಾಖಲಾಲಾಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.
ಬೆಂಗಳೂರಿನಲ್ಲಿ ಜೂನ್ 19 ರಂದು 138, ಜೂನ್ 20 ರಂದು 94, ಜೂನ್ 21 ರಂದು 196, ಜೂನ್ 22 ರಂದು 126, ಜೂನ್ 23 ರಂದು 107, ಜೂನ್ 24 ರಂದು 173, ಜೂನ್ 25 ರಂದು 113, ಜೂನ್ 26 ರಂದು 144, ಜೂನ್ 27 ರಂದು 596, ಜೂನ್ 28 ರಂದು 783, ಜೂನ್ 29 ರಂದು 738, ಜೂನ್ 30 ರಂದು 503, ಜುಲೈ 1 ರಂದು 735, ಜುಲೈ 2 ರಂದು 889 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.