ಬೆಂಗಳೂರು: ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ 1172 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಒಟ್ಟು ಸೋಂಕಿತರ ಸಂಖ್ಯೆ 8345 ಕ್ಕೆ ಏರಿಕೆಯಾಗಿದೆ. ಇವತ್ತು 195 ಮಂದಿ ಬಿಡುಗಡೆಯಾಗಿದ್ದು ಇದುವರೆಗೆ 965 ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ 7250 ಸಕ್ರಿಯ ಪ್ರಕರಣಗಳು ಇದ್ದು, ಕೊರೋನಾದಿಂದ 129 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು ಬಿಡುಗಡೆಯಾಗುತ್ತಿರುವವರ ಸಂಖ್ಯೆ ಪ್ರಮಾಣ ತೀರ ಕಡಿಮೆ ಇರುವುದರಿಂದ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ. ಬೆಂಗಳೂರಿನಲ್ಲಿ ಕಳೆದ 7 ದಿನಗಳಿಂದ 500 ರ ಗಡಿ ದಾಟಿ 1 ಸಾವಿರ ಸನಿಹದಲ್ಲಿದ್ದ ಸೋಂಕಿತರ ಸಂಖ್ಯೆ ಇವತ್ತು 1 ಸಾವಿರ ಗಡಿಯನ್ನೂ ದಾಟಿದೆ.
ರಾಜ್ಯದಲ್ಲಿ ಇಂದು 1839 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 21,549 ಕ್ಕೆ ಏರಿಕೆಯಾಗಿದೆ.