ಬೆಂಗಳೂರು ಮೂಲದ ಚಿನ್ನದ ವ್ಯಾಪಾರಿ ಕೊಚ್ಚಿಯ ಚೊಟ್ಟಾನಿಕ್ಕರ ದೇವಸ್ಥಾನಕ್ಕೆ 700 ಕೋಟಿ ಹಣವನ್ನ ದೇಣಿಗೆ ರೂಪದಲ್ಲಿ ನೀಡಲಿದ್ದಾರೆ.
“ತಾಯಿಯನ್ನ ಆರಾಧಿಸಲು ಆರಂಭಿಸಿದ ನಂತರ ನನ್ನ ಚಿನ್ನದ ವ್ಯಾಪಾರ ವಿಸ್ತರಣೆಯಾಯಿತು. ಅಮ್ಮನ ಆರ್ಶಿವಾದ ನನಗೆ ಅದೃಷ್ಟವನ್ನ ತಂದುಕೊಟ್ಟಿತು. ಹೀಗಾಗಿ ನನ್ನ ಗಳಿಕೆಯ ಒಂದು ಭಾಗವನ್ನ ನಾನು ದೇವಾಲಯದ ಅಭಿವೃದ್ಧಿಗೆ ಖರ್ಚು ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ರು.
ದೇವಾಲಯದ ಗರ್ಭಗುಡಿಯನ್ನ ಚಿನ್ನದ ಫಲಕಗಳಿಂದ ಮುಚ್ಚಲು ನಿರ್ಧರಿಸಲಾಗಿದೆ. ಪೂರ್ವ ಹಾಗೂ ಪಶ್ಚಿಮ ಪ್ರವೇಶ ದ್ವಾರದಲ್ಲಿ ಎರಡು ಬೃಹತ್ ಗೋಪುರಗಳನ್ನ ನಿರ್ಮಿಸಲಾಗುತ್ತೆ. ದೇವಾಲಯದ ನವೀಕರಣಕ್ಕೆ 300 ಕೋಟಿ ರೂಪಾಯಿ ಬಳಕೆ ಮಾಡಿದ್ರೆ ಉಳಿದ ಮೊತ್ತದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಅತಿಥಿ ಗೃಹಗಳು, ಸಭಾಂಗಣ, ಒಳಚರಂಡಿ ಸಂಸ್ಕರಣಾ ಘಟಕ ಹಾಗೂ ರಸ್ತೆ ಅಗಲೀಕರಣ ನಡೆಸಲಾಗುವುದು.