ಆಟೋ ಚಾಲಕನ ನೆರವಿನಿಂದ ನಗರದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ನಕಲಿ ಕರೆನ್ಸಿ ದಂಧೆಯನ್ನ ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿಗಳಾದ ಮೊಹಮ್ಮದ್ ಇಮ್ರಾನ್, ಮುಬಾರಕ್ ಹಾಗೂ ಜಮಾಲ್ ಅಖ್ತರ್ ಎಂಬವರನ್ನ ಬಂಧಿಸಲಾಗಿದೆ.
ಈ ಮೂವರಲ್ಲಿ ಒಬ್ಬ ಆಟೋ ಡ್ರೈವರ್ಗೆ ನಕಲಿ ನೋಟು ನೀಡಲು ಹೋಗಿ ಪೊಲೀಸ್ ಠಾಣೆ ಅತಿಥಿಯಾಗಿದ್ದಾರೆ.
ಮೊಹಮ್ಮದ್ ಇಮ್ರಾನ್ ಸಿಟಿ ಮಾರ್ಕೆಟ್ನಲ್ಲಿ ಆಟೋ ಹತ್ತಿದ್ದ. ಶಾಂತಿ ನಗರದ ಬಸ್ ನಿಲ್ದಾಣದಲ್ಲಿ ಇಳಿಯುವ ಸಂದರ್ಭ ಬಂದ ವೇಳೆ ಮೊಹಮ್ಮದ್ 100 ರೂಪಾಯಿ ನೋಟನ್ನ ಆಟೋ ಡ್ರೈವರ್ಗೆ ನೀಡಿದ್ದಾನೆ. ಆದರೆ ಆಟೋ ಚಾಲಕನಿಗೆ ಅದು ನಕಲಿ ನೋಟು ಎಂಬುದು ತಕ್ಷಣವೇ ತಿಳಿದು ಬಂದಿದೆ.
ಕೂಡಲೇ ಆಟೋ ಚಾಲಕ ಇಮ್ರಾನ್ರನ್ನ ವಿಲ್ಸನ್ ಗಾರ್ಡನ್ನಲ್ಲಿರುವ ಠಾಣೆಗೆ ಕರೆದೊಯ್ದಿದ್ದಾರೆ. ಇಮ್ರಾನ್ ಹೇಳಿಕೆ ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನ ಖೆಡ್ಡಾಗೆ ಕೆಡವಿದ್ದಾರೆ. ಬಂಧಿತರಿಂದ ಶಾಯಿ ಬಾಟಲಿ, ಎ 4 ಗಾತ್ರದ ಹಾಳೆಗಳು, ಮುದ್ರಣ ಪರದೆಗಳು, ಸಿಪಿಯು, ಕೀ ಬೋರ್ಡ್ ಹಾಗೂ ಪೆನ್ ಡ್ರೈವ್ಗಳನ್ನ ವಶಕ್ಕೆ ಪಡೆಯಲಾಗಿದೆ.